ಸಾಯಿ ಕುಮಾರ್

Actor

Date of Birth:

27-Jul-1960

ಕನ್ನಡ ಚಿತ್ರರಂಗದಲ್ಲಿ ಡೈಲಾಗ್ ಕಿಂಗ್ ಎಂದರೆ ನೆನಪಾಗೋದು ಸಾಯಿಕುಮಾರ್ ಇವರ ಮೂಲ ಹೆಸರು ಸಾಯಿ ಕುಮಾರ್ ಪುಡಿದೆದ್ದಿ. ಹುಟ್ಟಿದ್ದು 27 ಜುಲೈ 1960 ರಲ್ಲಿ ಜನಿಸಿದರು. ತಂದೆ ಶರ್ಮಾ ಪಿ.ಜೆ, ತಾಯಿ ಕೃಷ್ಣ ಜ್ಯೋತಿ. ಪತ್ನಿ ಸುರೇಖಾ ಕುಮಾರ್. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಖ್ಯಾತ ನಟರಲ್ಲಿ ಇವರು ಕೂಡ ಒಬ್ಬರು. ಕಲಾವಿದರು ಮತ್ತು ದೂರದರ್ಶಕದ ನಿರೂಪಕರಾಗಿದ್ದರು. ಕನ್ನಡದಲ್ಲಿ ಅಷ್ಟೆ ಅಲ್ಲದೆ ತಮಿಳು, ತೆಲಗು, ಎಲ್ಲಾ ಭಾಷೆಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೆಮಿನಿ ಟಿವಿ ಮತ್ತು ಕನ್ನಡವಾಹಿನಿಗಳಲ್ಲಿ ಡೀಲ್ ಆರ್ ನೊ ಡೀಲ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಾಲ್ಯದಿಂದಲೆ ಸಾಕಷ್ಟು ಆಸಕ್ತಿಯನ್ನು ಬೆಳಸಿಕೊಂಡಿದ್ದರು. ಹಾಗಾಗಿ ಸಿನಿಮಾ ರಂಗಕ್ಕೆ ಪ್ರವೇಶವನ್ನು ಮಾಡಿದರು. ಸಾಕಷ್ಟು ಕನ್ನಡ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟವರು ಇವರು, ಖಡಕ್ ಪೊಲೀಸ್ ಪಾತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.ಅವರ ಧ್ವನಿಯಿಂದ ಬರುವ ಖಡಕ್ ಡೈಲಾಗ್ ಗಳಿಗೆ ಅಭಿಮಾನಿಗಳು ದಿಲ್ ಖುಷ್ ಆಗುತ್ತಾರೆ. ನಟಿಸಿರುವ ಎಲ್ಲಾ ಪಾತ್ರಗಳಿಗೂ ಕೂಡ ಜೀವ ತುಂಬಿ ಅಭಿನಯಿಸುತ್ತಿದ್ದರು.ಕೇವಲ ನಾಯಕ ನಟನಷ್ಟೆ ಅಲ್ಲದೆ, ಖಳನಾಯಕನಾಗಿಯೂ ಕೂಡ ಅಭಿನಯಿಸಿದ್ದಾರೆ. ರಂಗಿತರಂಗ ಚಿತ್ರದ ನಟನೆಗಾಗಿ ಬೆಸ್ಟ್ ಸಪೋರ್ಟಿಂಗ್ ಅವಾರ್ಡ್ ಕೂಡ ಬಂದಿದೆ. ಅಷ್ಟೆ ಅಲ್ಲದೆ ಸಾಕಷ್ಟು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp