ವಿ ರವಿಚಂದ್ರನ್

Actor

Date of Birth:

30-May-1961

ಸ್ಯಾಂಡಲ್ ವುಡ್ ನಲ್ಲಿ ಕ್ರೇಜಿಸ್ಟಾರ್ ಅಂತಾನೇ ಫೇಮಸ್ ಆಗಿರೋರು ಇವರು. ಇವರ ಮೊದಲ ಹೆಸರು ವೀರಾಸ್ವಾಮಿ ರವಿಚಂದ್ರನ್... ಆದರೆ ಕನ್ನಡ ಚಿತ್ರರಂಗದಲ್ಲಿ ವಿ ರವಿಚಂದ್ರನ್ ಅಂತಾನೇ ಚಿರಪರಿಚಿತ. ಹುಟ್ಟಿದ್ದು 30 ಮೇ 1961 ರಲ್ಲಿ, ಖ್ಯಾತ ನಿರ್ಮಾಪಕರಾದ ಎನ್. ವೀರಾಸ್ವಾಮಿಯವರ ಮಗ. ತಾಯಿಯ ಹೆಸರು ಪುಟ್ಟಮಲ್ಲಿ. ಪತ್ನಿ ಸುಮತಿ, ಈ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ರವಿಚಂದ್ರನ್ ನಟನೆ,ನಿರ್ಮಾಣ ನಿರ್ದೇಶನ ಎಲ್ಲದಕ್ಕೂ ಕೂಡ ಸೈ. ರವಿಚಂದ್ರನ್ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಚಿತ್ರಗಳನ್ನು ನಿರ್ಮಿಸಿದರು. ರವಿಚಂದ್ರನ್ ಅವರೆ ನಟಿಸಿ ನಿರ್ಮಿಸಿದ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆಯು ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು. ರವಿಚಂದ್ರನ್ ಬಹುಮುಖ ಪ್ರತಿಭೆ. ನಟ, ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದ್ದಾರೆ. ವಿನೂತನ ರೀತಿಯ ಪ್ರಯೋಗದಲ್ಲಿ ರವಿಚಂದ್ರನ್ ಎತ್ತಿದ ಕೈ.. ರವಿಚಂದ್ರನ್ ಚಿತ್ರದಲ್ಲಿ ಸಾಕಷ್ಟು ವಿಭಿನ್ನತೆ, ವಿನೂತನತೆ ಎಲ್ಲವೂ ಕೂಡ ಇರುತ್ತದೆ. ಹಾಡುಗಳು ಮಾತ್ರ ಅಭಿಮಾನಿಗಳ ಬಾಯಲ್ಲಿ ಯಾವಾಗಲೂ ಗುನು ಗುನಿಸುತ್ತದೆ. ಅಭಿಮಾನಿ,ಕನಸುಗಾರ,ಏಕಾಂಗಿ,ಮಲ್ಲ,ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ,ಯುಗಪುರುಷ,ಯುದ್ದಕಾಂಡ, ರಣಧೀರ, ಅಂಜದ ಗಂಡು,ಪ್ರೇಮಲೋಕ, ಈ ರೀತಿಯ ವಿಭಿನ್ನ ಚಿತ್ರಗಳನ್ನು ತೆರೆ ಮೇಲೆ ತಂದವರು.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp