ಅಂಬರೀಶ್

Actor

Date of Birth:

29-May-1952

Place of Birth:

ದೊಡ್ಡರಸಿನಕೆರೆ

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್. ಮಂಡ್ಯದ ಗಂಡು ಅಂದ್ರೆ ನೆನಪಾಗೋದೆ ಅಂಬರೀಶ್.. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟ. ಹುಟ್ಟಿದ್ದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ. ತಂದೆ ಹುಚ್ಚೆಗೌಡ, ತಾಯಿ ಪದ್ಮಮ್ಮ. ಖ್ಯಾತ ಪಿಟೀಲು ವಿದ್ವಾನ್ ಆಗಿದ್ದದಂತಹ ಟಿ.ಚೌಡಯ್ಯ ನವರ ಮೊಮ್ಮಗ. 1973 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಜಲೀಲನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದರು. ಅಂತ ಚಿತ್ರ ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮವನ್ನು ನೀಡಿತು. ಅಷ್ಟೆ ಅಲ್ಲದೆ ರಾಜಕೀಯ ಪಕ್ಷದಲ್ಲೂ ಕೂಡ ತಮ್ಮನ್ನ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1982 ರಲ್ಲಿ ಅಂತ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ. ಪುಟ್ಟಣ್ಣ ಕನ್ನಗಲ್ ನಿರ್ದೇಶನದ ಮಸಣದ ಹೂವು ಚಿತ್ರದಲ್ಲಿ "ಅತ್ಯುತ್ತಮ ಪೋಷಕ ನಟ" ಕರ್ನಾಟಕ ರಾಜ್ಯ ಪ್ರಶಸ್ತಿ ರಾಜೇಂದ್ರ ಬಾಬು ನಿರ್ದೇಶನದ "ಒಲವಿನ ಉಡುಗೊರೆ" ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp