ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಇವರು ತೆಲುಗು ಚಿತ್ರರಂಗದಲ್ಲಿಯೂ ಬಹು ಬೇಡಿಕೆಯ ನಟರಾಗಿ ಹೆಸರು ಮಾಡಿದ್ಡಾರೆ. ೧೯೯೯ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಅದೇ ವರ್ಷ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರತ್ಯರ್ಥ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು. ೨೦೦೦ರಲ್ಲಿ ತೆರೆ ಕಂಡ ಸುನೀಲ್ ಕುಮಾರ್ ದೇಸಾಯಿ ಅವರದೇ ನಿರ್ದೇಶನದ ಸ್ಪರ್ಶ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು. ಮೈ ಆಟೋಗ್ರಾಪ್ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿದ್ದಾರೆ. ಕಿಚ್ಚ ಎಂದೇ ಖ್ಯಾತಿ ಪಡೆದಿರುವ ಸುದೀಪ್ ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳ ಮಗನಾಗಿ ಜನಿಸಿದರು. ಇವರು ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪ್ರಿಯಾ ಜೊತೆ ಸಪ್ತಪದಿ ತುಳಿದ್ದಾರೆ. ಇವರಿಗೆ ಮುದ್ದಾದ ಮಗಳಿದ್ದಾಳೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿಕೊಂಡು ಅಭಿನಯ ಚಕ್ರವರ್ತಿ ಎಂದೆ ಪ್ರಸಿದ್ದಿಯಾಗಿದ್ದಾರೆ.
...
...
... 2019
... 2018
... 2018
ಕ್ಯಾಪ್ಟನ್ ರಾಮ್
... 2017
ಮುರಾರಿ
... 2016
ಸತ್ಯ / ಶಿವ
... 2016
ಭಾರ್ಗವ ಚಂದ್ರ
... 2015
... 2014
ಸುದೀಪ್
... 2012
ತೇಜ
... 2010