ರಮ್ಯಾ

Actress

Date of Birth:

11-May-1982

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಎಂದೆ ಗುರುತಿಸಿಕೊಂಡಿರುವ ರಮ್ಯ ಪಡ್ಡೆ ಹುಡುಗರು ನಿದ್ದೆ ಕದ್ದಿದ್ಳು ಅಂದರೆ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ಚಿತ್ರರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದರು. ಊಟಿಯ ಸೇಂಟ್ ಹಿಲ್ಡಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಪದವಿಯನ್ನು ಪಡೆದರು. ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ರಮ್ಯ ತನನಂ ತನನಂ ಹಾಗೂ ಸಂಜು ವೆಡ್ಸ್ ಗೀತಾ ಚಿತ್ರಗಳ ಅಭಿನಯಕ್ಕಾಗಿ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಅಷ್ಟೆ ಅಲ್ಲದೆ ರಮ್ಯ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್ನ ಸಕ್ರಿಯ ಸದಸ್ಯರಾಗಿದ್ದಾರೆ. ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ೨೩ ಆಗಸ್ಟ್ ೨೦೧೩ ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರನ್ನು ೬೭,೬೧೧ ಮತಗಳ ಅಂತರದಿಂದ ಸೋಲಿಸಿ ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು. ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿರುವುದರಲ್ಲಿ ರಮ್ಯಾ ಮೊದಲಿಗರಾಗಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp