ಶಿವರಾಜ್ ಕುಮಾರ್

Actor

Date of Birth:

12-Jul-1962

Place of Birth:

ಚೆನ್ನೈ, ತಮಿಳುನಾಡು

ಕನ್ನಡ ಚಿತ್ರರಂಗದ ಪ್ರಸಿದ್ದ ನಟ. ಕನ್ನಡದ ಮೇರು ನಟರಾದ ಡಾ. ರಾಜ್ ಕುಮಾರ್ ಅವರ ಮಗ. 1982 ರಲ್ಲಿ ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದರು. ನಂತರ ಅವರ ಅಭಿನಯದ ಮೊದಲ ಮೂರು ಚಿತ್ರಗಳು ಕೂಡ ಶತದಿನೋತ್ಸವದ ಯಶಸ್ಸು ಅವರಿಗೆ ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ತಂದುಕೊಟ್ಟಿತ್ತು. ತಾಯಿ ಪಾರ್ವತಮ್ಮ, ಕನ್ನಡದ ಚಿತ್ರರಂಗದ ನಿರ್ಮಾಪಕಿ.. ಪತಿ ಗೀತಾ ಶಿವರಾಜ್ ಕುಮಾರ್, ಹಾಗೂ ನಿವೇದಿತಾ, ನಿರುಪಮಾ ಎನ್ನುವ ಎರಡು ಮುದ್ದಾದ ಹೆಣ್ಣು ಮಕ್ಕಳ ತಂದೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿಯೂ ಹಿನ್ನಲೆಗಾಯಕನಾಗಿಯೂ, ಒಳ್ಳೆಯ ನೃತ್ಯಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ರಾಜ್ಯ ಪ್ರಶಸ್ತಿಗಳು, ಉಜ್ವಲ ಪ್ರಶಸ್ತಿ, ಚಿತ್ರ ರಸಿಕರ ಸಂಘ, ಫಿಲ್ಮ್ ಫೇರ್ ಪ್ರಶಸ್ತಿ, ಹೀರೋಹೋಂಡ ಎಕ್ಸ್ಪ್ರೆಸ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸ್ಕ್ರೀನ್ ಅವಾರ್ಡ್ಸ್, ಎಸ್.ಐ.ಸಿ.ಎ. ವಿಶೇಷ ಜ್ಯೂರಿ ಪ್ರಶಸ್ತಿ, ಹಲೋ ಗಾಂಧಿನಗರ ಪ್ರಶಸ್ತಿ, ಈ ಟಿವಿ ವಾಟಿಕಾ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp