ಟಾಲಿವುಡ್ ದಿಗ್ಗಜರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್..! ಕಾರಣ ಏನ್ ಗೊತ್ತಾ..?

09-Nov-2018

ಅಭಿನಯ ಚರ್ಕವರ್ತಿ ಸುದೀಪ್ಗೆ ಎಲ್ಲಾ ಭಾಷೆಗಳಲ್ಲೂ ಕೂಡ ಅಭಿಮಾನಿಗಳಿದ್ದಾರೆ.. ಇದೀಗ ನಟ ಸುದೀಪ್ ಅವರು ಟಾಲಿವುಡ್ ದಿಗ್ಗಜರಾದ ಪುರಿ ಜಗನ್ನಾಥ್ ಸುಕುಮಾರ್, ನಟಿ ಚಾರ್ಮಿ, ಮತ್ತು ನಟ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ಕಿಚ್ಚ ಸುದೀಪ್ ಹೈದರಾಬಾದ್‍ನಲ್ಲಿ ಪೈಲ್ವಾನ್ ಸಿನಿಮಾದ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಹುಭಾಷಾ ನಟರಾಗಿರುವ ಸುದೀಪ್ ಎಲ್ಲ ಚಿತ್ರರಂಗದಲ್ಲಿ ಸ್ನೇಹಿತರನ್ನು ಮಾಡಿಕೊಂಡಿದ್ದಾರೆ.. ಹೀಗಾಗಿ ಶೂಟಿಂಗ್‍ನ ಬಿಡುವಿನ ಸಮಯದಲ್ಲಿ ಹೈದರಾಬಾದ್‍ನಲ್ಲಿ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಅವರೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

ಅಷ್ಟೇ ಅಲ್ಲದೇ ಚಿತ್ರೀಕರಣ ನಡೆಯುತ್ತಿರುವ ಕಾರಣ ಹೈದರಾಬಾದ್‍ನಲ್ಲಿ ಇದುದ್ದರಿಂದ ಚಿತ್ರತಂಡದವರೆಲ್ಲ ಸೇರಿ ಸೆಟ್‍ನಲ್ಲೇ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ. ಸುದೀಪ್ ಅವರು ಬರೀಗಾಲಿನಿಂದ ಬಂದು ಬಾವುಟ ಹಾರಿಸಿ ಕನ್ನಡಾಂಬೆಗೆ ನಮನವನ್ನು ಸಲ್ಲಿಸಿದ್ದರು. ಇದೀಗ ಸುದೀಪ್ ಅವರು ಪೈಲ್ವಾನ್, ಕೋಟಿಗೊಬ್ಬ 3 ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಜನ್ 6 ನಲ್ಲಿಯೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೈದರಬಾದ್ ನಲ್ಲಿ ನಮ್ಮ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿರೋದು ಸುದೀಪ್ ಖುಷಿಯಾಗಿದೆಯಂತೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp