ಶೂಟಿಂಗ್’ಗಾಗಿ ಹೋಗುತ್ತಿದ್ದ ‘ಅಪ್ಪು’ ಮಾರ್ಗಮಧ್ಯದಲ್ಲಿ ಇಳಿದು ಹೋಗಿದ್ದೆಲ್ಲಿಗೆ ಗೊತ್ತಾ..?

09-Nov-2018

ಸ್ಯಾಂಡಲ್ ವುಡ್ ನಲ್ಲಿ ಬಾಲ ನಟಗಾಗಿ ಸಾಕಷ್ಟು ಹೆಸರು ಮಾಡಿದವರಲ್ಲಿ ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಕೂಡ ಒಬ್ಬರು. ಚಿಕ್ಕಂದಿಂದಲೆ ನಟನೆಯನ್ನು ಕರಗತ ಮಾಡಿಕೊಂಡಿರುವ ಅಪ್ಪು ಎಂತಹ ಪಾತ್ರ ಕೊಟ್ಟರು ನೀರು ಕುಡಿದಷ್ಟೆ ಸುಲಭವಾಗಿ ಮಾಡುತ್ತಾರೆ. ಈ ನಡುವೆ ಶೂಟಿಂಗ್ ಗಾಗಿ ತೆರಳುತ್ತಿದ್ದ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಮಾರ್ಗಮಧ್ಯದಲ್ಲಿ ಬಂದ ಅತ್ತಿಗುಂಡಿ ಗ್ರಾಮದಲ್ಲಿ ಇಳಿದು ಇಡೀ ಗ್ರಾಮವನ್ನು ಸುತ್ತಿದ್ದಾರಂತೆ. ಅಷ್ಟೆ ಅಲ್ಲದೆ ಸಿಕ್ಕಾಪಟ್ಟೆ ಖುಷಿ ಕೂಡ ಆಗಿದ್ದಾರಂತೆ.. ಕಾರಣ ಏನ್ ಗೊತ್ತಾ..? ಮುಂದೆ ಓದಿ

ಅಷ್ಟಕ್ಕೂ ಪುನೀತ್ ರಾಜ್ ಕುಮಾರ್ ಗೂ ಮತ್ತು  ಆ ಗ್ರಾಮಕ್ಕೂಇರುವ ನಂಟು ಏನು ಅಂತ ಯೋಚನೆ ಮಾಡುತ್ತಿದ್ದೀರಾ..? ಸಾಮಾನ್ಯವಾಗಿ ಇಂತ ಪ್ರಶ್ನೆ ಮೂಡುವುದು ಕಾಮನ್ ಬಿಡಿ.. ಇದಕ್ಕೆ ಕಾರಣ  ಪುನೀತ್ ಬಾಲನಟನಾಗಿ ನಟಿಸಿದ 1985ರಲ್ಲಿ ಬಿಡುಗಡೆಗೊಂಡ ನ್ಯಾಷನಲ್ ಅವಾರ್ಡ್ ಪಡೆದ 'ಬೆಟ್ಟದ ಹೂ' ಚಿತ್ರದ ಶೂಟಿಂಗ್ ನಡೆದಿದ್ದು ಚಿಕ್ಕಮಗಳೂರಿನ ಅತ್ತಿಗುಂಡಿ ಎನ್ನುವ ಈ ಪುಟ್ಟ ಗ್ರಾಮದಲ್ಲಂತೆ.. ಆದ ಕಾರಣ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಲು ಕಾರಿನಿಂದ ಕೆಳಗಿಳಿದು ಪುಟ್ಟ ಮಕ್ಕಳಂತೆ ಇಡೀ ಗ್ರಾಮದಲ್ಲಿ ಸುತ್ತಾಡಿ, ತಾವು ಶೂಟಿಂಗ್ ನಡೆದ ಸ್ಥಳಗಳನ್ನು ನೋಡಿ , ಆ ಗ್ರಾಮದ ಜನರ ಜತೆ ಮಾತನಾಡಿ, ಕಳೆದು ಹೋದ ಸುಂದರ ನೆನಪುಗಳನ್ನು ನೆನೆದು ಖುಷಿ ಪಟ್ಟಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp