ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ “lots of love to you” ಅಂದಿದ್ದು ಯಾರಿಗೆ ಗೊತ್ತಾ..?

12-Nov-2018

ಬಾಲ್ಯದಿಂದಲೇ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿಯರಲ್ಲಿ ಅಮೂಲ್ಯ ಕೂಡ ಒಬ್ಬರು.. ಚಿಕ್ಕವಯಸ್ಸಿನಿಂದಲೇ ನಟನೆಯನ್ನು ಕರಗತ ಮಾಡಿಕೊಂಡಿದ್ದರು.. ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಚಂದನವನದಲ್ಲಿ ಭರವಸೆ ಮೂಡಿಸಿದ ನಟಿಯಾದರು. ಇತ್ತಿಚಿಗೆ ನಟಿ ಅಮೂಲ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದಾರೆ. ಮದುವೆಯಾಗಿ ಸುಂದರ ಸಂಸಾರ ನಡೆಸುತ್ತಿರುವ ಚೆಲುವಿನ ಚಿತ್ತಾರದ ಹುಡುಗಿ ಸ್ಯಾಂಡಲ್​ವುಡ್​ ನಂಟನ್ನು ಇನ್ನೂ ಬಿಟ್ಟಿಲ್ಲ..

ಆಗಾಗ ಕೆಲ ಸ್ಟಾರ್​ ನಟರ, ನಟಿಯರ ಮನೆಗೆ ಹೋಗುವುದು, ಅವರೊಂದಿಗೆ ಬೆರೆಯುವುದು, ಅವರ ಜೊತೆ  ಚರ್ಚೆಸುವುದು ಮಾಡುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೆ ದೀಪಾವಳಿಗೆ ಗೋಲ್ಡನ್​ ಸ್ಟಾರ್​  ಮನೆಗೆ ಹೋಗಿ ಹಬ್ಬ ಸೆಲೆಬ್ರೇಟ್​ ಮಾಡಿ ಬಂದಿದ್ದ ಅಮೂಲ್ಯ  ಇದೀಗ ದರ್ಶನ್ ಮನೆಗೂ  ಹೋಗಿ ಬರುತ್ತಿರುತ್ತಾರೆ... ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ  ಸೋಶಿಯಲ್​ ಮಿಡಿಯಾದ ಮೂಲಕ ಬರ್ತ್​ಡೇ ಗೆ ವಿಶ್ ಮಾಡಿದ್ದಾರೆ..ಚಾಲೆಂಜಿಂಗ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬ ಪ್ರಯುಕ್ತ ನಟಿ ಅಮೂಲ್ಯ ಜಗದೀಶ್ ಶುಭಾಶಯ ತಿಳಿಸಿದ್ದಾರೆ. ನಟಿ ಅಮೂಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಅವರ ಜೊತೆಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ” ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ. ನೀವು ಯಾವಾಗಲೂ ಸಂತೋಷದಿಂದ ಇರಬೇಕು” ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

 

keywords: amulya kannada actress

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp