7 ಭಾಷೆಗಳಲ್ಲಿ ಆರ್ಭಟಿಸಲಿದ್ಯಾ ಸುದೀಪ್ ಅಭಿನಯದ `ಪೈಲ್ವಾನ್'..!

13-Nov-2018

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಪ್ರಯೋಗಗಳು ಶುರುವಾಗಿವೆ. ಒಂದು ಸಿನಿಮಾ ತುಂಬಾ ಅದ್ಭುತವಾಗಿದೆ ಅನ್ನೋವಷ್ಟರಲ್ಲಿ ಮತ್ತೊಂದು ಸಿನಿಮಾ ತೆರೆ ಮೇಲೆ ಬರಲು ಸಿದ್ದವಾಗುತ್ತಿರುತ್ತದೆ. ಕೆಜಿಎಫ್ ಸಿನಿಮಾ ಚಂದನವನದಲ್ಲಿ ದಾಖಲೆ ಬರೆಯಲು ಸಿದ್ದವಾಗಿದೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವ ಪೈಲ್ವಾನ್ ಚಿತ್ರ ಕೂಡ ಮತ್ತೊಂದು ದಾಖಲೆ ಬರೆಯೋಕೆ ರೆಡಿಯಾಗುತ್ತಿದೆ. ಪರಭಾಷೆಗಳಿಗಿಂತ ನಮ್ಮ ಸಿನಿಮಾ ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ ನಮ್ಮ ಸ್ಯಾಂಡಲ್ ವುಡ್.

ಎಸ್.. ಈಗಾಗಲೇ ಪೈಲ್ವಾನ್ ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗಿದ್ದು, ಪೈಲ್ವಾನ್ ಚಿತ್ರ ಬರೋಬ್ಬರಿ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಪೈಲ್ವಾನ್ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಪಂಜಾಬಿ ಹಾಗೂ ಭೋಜ್ಪುರಿ ಭಾಷೆಗಳಿಗೆ ಡಬ್ ಆಗಲಿದೆ ಎಂದು ಹೇಳಲಾಗುತ್ತಿದೆ. ಸ್ಯಾಂಡಲ್ ವುಡ್ ನ ಕೆಜಿಎಫ್ ಚಿತ್ರಕ್ಕೆ ಇತರೆ ಚಿತ್ರರಂಗಗಳಲ್ಲೂ ಭಾರೀ ಬೆಂಬಲ ಸಿಕ್ಕಿರುವ ಹಿನ್ನೆಲೆಯಲ್ಲಿ ಪೈಲ್ವಾನ್ ಚಿತ್ರತಂಡ ಈ ನಿರ್ಧಾರಕ್ಕೆ ಬರಲು ಕಾರಣ ಎಂದು ಹೇಳಲಾಗುತ್ತಿದೆ.. ಈಗಾಗಲೇ ಡಬ್ಬಿಂಗ್ ಹಕ್ಕು ಖರೀದಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಸ್ಯಾಂಡಲ್ವುಡ್ ನಲ್ಲಿ ಒಳ್ಳೆಯ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ಬರಲಿ ಅನ್ನುವುದು ಸಿನಿ ರಸಿಕರ ಅಭಿಪ್ರಾಯ

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp