ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಿಮಿಕ್’ ಶೂಟಿಂಗ್ ಕಂಪ್ಲೀಟ್‌!

08-Jan-2019

ಚಂದನವನದ ಗೋಲ್ಡನ್ ಸ್ಟಾರ್ ಗಣೇಶ್ ಆರೆಂಜ್ ಚಿತ್ರದ ಸಕ್ಸಸ್ ನಂತರ, ಈ ವರ್ಷದ ಆರಂಭಕ್ಕೆ ಸಿನಿಮಾವೊಂದನ್ನು ತೆರೆ ಮೇಲೆ ತರಲು ಸಿದ್ದರಾಗಿದ್ದಾರೆ. . ಗೋಲ್ಡನ್ ಸ್ಟಾರ್ ಗಣಿ ಮೊಟ್ಟ ಮೊದಲ ಬಾರಿಗೆ ಗಿಮಿಕ್ ಅನ್ನೋ ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಇದೀಗ  ಈ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ‘ಗೌರಮ್ಮ’ ‘ಕುಟುಂಬ’ ‘ಕೋಟಿಗೊಬ್ಬ’ ಖ್ಯಾತಿಯ ನಿರ್ದೇಶಕ ನಾಗಣ್ಣ ಗಿಮಿಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ದೀಪಕ್ ಸಾಮಿ ಗಿಮಿಕ್  ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.

ಚಿತ್ರದ ಬಹುತೇಕ ಚಿತ್ರೀಕರಣ ಶ್ರೀಲಂಕಾದಲ್ಲಿ ವಿಭಿನ್ನವಾಗಿರುವ ಮನೆಯೊಂದರಲ್ಲಿ ನಡೆದಿದ್ದು, ಉಳಿದಂತೆ ಬೆಂಗಳೂರು, ಮೈಸೂರಿನಲ್ಲಿ ನಡೆದಿದೆ.ಉಳಿದಂತೆ  ಈ ಚಿತ್ರದಲ್ಲಿ ಸಾಧುಕೋಕಿಲಾ, ಶೋಭರಾಜ್, ಚಿ.ಗುರುದತ್, ರವಿಶಂಕರ್ ಗೌಡ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಸಿನಿಮಾಗೆ ಇದೆ.. ಅರ್ಜುನ್ ಜನ್ಯಾ ಸಂಗೀತ, ರವಿವರ್ಮ ಸಾಹಸ, ವಿಘ್ನೇಶ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಕೂಡ ಆಗಿತ್ತು.. ಇತ್ತೀಚೆಗೆ ಕನ್ನಡದಲ್ಲಿ ಹಾರರ್ ಥ್ರಿಲ್ಲರ್‌ ಜಾನರ್‌ನ ಸಿನಿಮಾಗಳು ಸಾಕಷ್ಟು ಬಂದಿವೆ..ಅದರ ಸಾಲಿಗೆ ಇವು ಸೇರುತ್ತದೋ ಅಥವಾ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸುತ್ತದೋ ಕಾದು ನೋಡಬೇಕಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp