ನಮ್ಮ ಸ್ಯಾಂಡಲ್,ವುಡ್ ವರನಟ ಡಾ.ರಾಜ್ಕುಮಾರ್ ಹೇಗೆ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವೋ ಅದೇ ರೀತಿ ತೆಲುಗಿನಲ್ಲೂ ಕೂಡ ಲೆಜೆಂಡ್ ಒಬ್ರೂ ಇದ್ದಾರೆ. ಅವರೂ ಬೇರಾರು ಅಲ್ಲ.. ಅವರೇ ನಂದಮೂರಿ ತಾರಕ ರಾಮ್ರಾವ್ (ಎನ್ಟಿಆರ್). ಈ ಇಬ್ಬರೂ ನಟರ ನಡುವೆ ಹಿಂದಿನಿಂದಲೂ ಸಾಕಷ್ಟು ಬಾಂಧವ್ಯ ಬೆಸುಗೆ ಎಲ್ಲವೂ ಕೂಡ ಇದೆ. ಅದೇ ರೀತಿ ಎನ್ಟಿಆರ್ ಹಾಗೂ ರಾಜ್ ಫ್ಯಾಮಿಲಿ ನಡುವೆಯೂ ಸಾಕಷ್ಟು ಅವಿನಾಭಾವ ಸಂಬಂಧವಿದೆ.. ಇದೀಗ ಎನ್ಟಿಆರ್ ಜೀವನಾಧರಿತ ಕಥೆ ’ಕಥನಾಯಕುಡು’ ಸಿನಿಮಾ ಸಿದ್ದವಾಗಿದ್ದು,, ಸದ್ಯ ಈ ಪಾತ್ರದಲ್ಲಿ ಎನ್ಟಿಆರ್ ಪುತ್ರ ನಂದಮುರಿ ಬಾಲಕೃಷ್ಣ ಅಭಿನಯಿಸಿದ್ದಾರೆ.. ಈ ಚಿತ್ರದ ಪ್ರಮೋಷನ್ಗಾಗಿ ನಿನ್ನೆಯಷ್ಟೆ ಬಾಲಯ್ಯ ಬೆಂಗಳೂರಿಗೆ ಬಂದಿದ್ದರು.
ಈ ಸಮಯದಲ್ಲಿ ಸ್ಯಾಂಡಲ್ವುಡ್ ಸ್ಟಾರ್ಗಳಾದ ಪುನೀತ್ರಾಜ್ಕುಮಾರ್, ಯಶ್, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು... ಪ್ರೆಸ್ಮೀಟ್ನಲ್ಲಿ ಎರಡು ಕುಟುಂಬ ನಡುವಿನ ಬಾಂಧವ್ಯ ಹೇಗಿದೆ ಅನ್ನೋದನ್ನ ಪ್ರೂವ್ ಮಾಡುವ ಘಟನೆಯೂ ಕೂಡ ನಡೆದಿದೆ. ಚಿತ್ರದ ಪ್ರಮೋಷನ್ ವೇಳೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಬಾಲಕೃಷ್ಣ ಇಬ್ಬರೂ ಅಕ್ಕಪಕ್ಕದಲ್ಲೇ ಕುಳಿತುಕೊಂಡಿದ್ದರು... ಈ ಸಮಯದಲ್ಲಿ ಬಾಲಯ್ಯ ಅಪ್ಪುಗೆ ರಾಜ್ ಬಯೋಪಿಕ್ ಮಾಡುವಂತೆ ಸಲಹೆಯನ್ನು ಕೂಡ ಕೊಟ್ಟರಂತೆ.. ತುಂಬಾ ಮಾತನಾಡಿ ದಣಿದಿದ್ದ ಬಾಲಯ್ಯನ ಮುಖದಲ್ಲಿ ಬೆವರು ಬರುತ್ತಾ ಇತ್ತು.. ಅಪ್ಪು ಇದನ್ನು ಗಮನಿಸಿ ತಮ್ಮಲ್ಲಿರೋ ಕರ್ಚಿಫ್ ತೆಗೆದುಕೊಂಡು ಪ್ರೀತಿಯಿಂದ ಬಾಲಯ್ಯನ ಮುಖವನ್ನ ಒರೆಸಿದರು. ದೊಡ್ಮನೆ ಕುಟುಂಬದ ಅಪ್ಪುವಿನ ಕಾಳಜಿ ನೋಡಿ ಬಾಲಯ್ಯ ನಿಜಕ್ಕೂ ನೀರಾಗಿ ಹೋದರು...ಒಟ್ಟಾರೆ ಈ ವಿಷಯದಿಂದ ಅಪ್ಪು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು
Leave a comment