ಸದ್ದಿಲ್ಲದೆ ಅರಿಶಿನ ಶಾಸ್ತ್ರ ಮುಗಿಸಿಕೊಂಡ ನೀರ್ ದೋಸೆ ಬೆಡಗಿ ಹರಿಪ್ರಿಯಾ..!!?

11-Jan-2019

ಸಿನಿಮಾ ಇಂಡಸ್ಟ್ರಿಯೇ ಅಂತದ್ದು. ಯಾವುದೇ ಸದ್ದಿಲ್ಲದೇ , ರಾತ್ರಿ ಕಳೆದು ಬೆಳಗ್ಗೆ ಮೂಡುತ್ತಲೇ ಸ್ಟಾರ್ ಗಳಾಗಿ ಬಿಡುತ್ತಾರೆ. ಮತ್ತೆ ಕೆಲವರ ಲೈಫ್ ಬದಲಾಗಿಬಿಡುತ್ತೆ. ಯಾಕೆ ಈ ಮಾತು ಹೇಳ್ತಿದ್ದೀರಾ ಅಂತಾ ಯೋಚಿಸ್ತಾ ಇದ್ದೀರಾ.. ಸ್ಯಾಂಡಲ್’ವುಡ್  ಉಗ್ರಂ ನಾಯಕಿ ಹರಿಪ್ರಿಯಾ ಯಾರಿಗೂ ಹೇಳದೆ ಮದುವೆಯಾಗ್ತಿದ್ದಾರೆ. ಕದ್ದು ಮುಚ್ಚಿ ಅರಿಶಿನ ಶಾಸ್ತ್ರ ಕೂಡ ಮುಗಿಸಿದ್ದಾರೆಂಬ ಸುದ್ದಿ ವೈರಲ್ ಆಗಿದೆ. ಅಂದಹಾಗೇ ಈ ಹಿಂದೆ ಹರಿಪ್ರಿಯಾಗೆ ಮದುವೆ ವಿಚಾರ ಕೇಳಿದ್ರೆ ಸಣ್ಣಗೆ ನಕ್ಕು, ಈಗ್ಲೇ ಇಲ್ಲಪ್ಪಾ ಅಂತಾ ಯಾಮಾರಿಸ್ತಾ ಇದ್ದವರು ಏಕಾಏಕಿ ಹಸೆಮಣೆ ಏರಲು ಹೇಗೆ ಸಾಧ್ಯ.. ಅಂದಹಾಗೇ ನಟಿ ಹರಿಪ್ರಿಯಾ ಸಪ್ತಪದಿ ತುಳಿಯುತ್ತಿರುವುದು ಸಿನಿಮಾ ಕಲಾವಿದನನ್ನೇ…ಅದು ಬೇರೆ ಯಾರು ಅಲ್ಲಾ. ಮಜಾ ಟಾಕೀಸ್ ಖ್ಯಾತಿಯ ನಟ ಸೃಜನ್ ಲೋಕೇಶ್ ಅವರನ್ನು. ಅಯ್ಯೋ…! ಶಾಕ್ ಆದ್ರಾ…!

ಅಂದಹಾಗೇ ನಟಿ ಹರಿಪ್ರಿಯಾ ಸದ್ಯ ಕನ್ನಡ ಚಲನಚಿತ್ರರಂಗದ ಬಹು ಬೇಡಿಕೆಯ ನಟಿ. ಸಿನಿಮಾ ಆಯ್ಕೆಯಲ್ಲಿ ವಿಭಿನ್ನವಾಗಿ ಯೋಚಿಸುವ ನಟಿ ಹರಿಪ್ರಿಯಾ ಅರಿಶಿಣ ಶಾಸ್ತ್ರದ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ವಿಚಾರ ಯಾವುದು ಅಂತೀರಾ…? ಹೌದು ಹರಿಪ್ರಿಯಾ ಮದುವೆಯಾಗ್ತಿರೋದಂತೂ ನಿಜ. ಆದರೆ ನಿಜ ಜೀವನದಲ್ಲಿ ಅಲ್ಲ ಬದಲಾಗಿ  ರೀಲ್ ಲೈಫ್ ನಲ್ಲಿ.. ಸೃಜನ್ ರನ್ನ ಕೈ ಹಿಡಿಯುತ್ತಿದ್ದಾರೆ ಹರಿಪ್ರಿಯಾ...  ಸಿನಿಮಾದ ಕ್ಲೈಮಾಕ್ಸ್ ದೃಶ್ಯಗಳು ಇದಾಗಿದೆ. ಅಂದಹಾಗೇ ನಟ ಸೃಜನ್ ಲೋಕೇಶ್ ಅಲ್ಪ ಸಮಯದ ಬ್ರೇಕ್ ಬಳಿಕ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದು, ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದ ಮೂಲಕ ವಾಪಸ್ ಬಂದಿದ್ದಾರೆ. ಈ ಸಿನಿಮಾದಲ್ಲಿ ಸೃಜನ್ ಅವರಿಗೆ ಹೆಂಡತಿಯಾಗಿ ನಟಿ ಹರಿಪ್ರಿಯಾ ಅವರು ನಟಿಸುತ್ತಿದ್ದಾರೆ. ತೇಜಸ್ವಿ ಅವರ ಮೊದಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರಕ್ಕೆ ವೇಣು ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಗಿರಿಜಾ ಲೋಕೇಶ್, ಅವಿನಾಶ್, ತಬಲಾನಾಣಿ, ರಾಧಿಕಾ ರಾವ್, ಯಶಸ್ ಸೂರ್ಯ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದ್ದು, ಬಹು ಮುಖ್ಯವಾಗಿ ಸೃಜನ್ ಲೋಕೇಶ್ ಪುತ್ರ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp