ನನ್ನ ಕಂಡ್ರೆ ಯಾರಿಗೆ ಆಗಲ್ಲ ಸಾಕ್ಷಿ ಕೊಡಿ ನೋಡೋಣ ಎಂದ ಕರ್ನಾಟಕದ ಕ್ರಶ್..!!

01-Feb-2019

ಸ್ಯಾಂಡಲ್ ವುಡ್’ಗೆ ಕಿರಿಕ್ ಪಾರ್ಟಿಯ ಮೂಲಕ ಎಂಟ್ರಿಕೊಟ್ಟ ರಶ್ಮಿಕ ಮಂದಣ್ಣ ಯಾಋಇಗೆ ತಾನೆ ಗೊತ್ತಿಲ್ಲ ಹೇಳಿ.. ಕಿರಿಕ್ ಪಾರ್ಟಿ ಸಿನಿಮಾದ ನಂತರ ಕರ್ನಾಟಕದ ಕ್ರಶ್ ಅಂತಾನೇ ಫೇಮಸ್ ಆಗಿಬಿಟ್ಟರು..ಅದಾದ ನಂತರ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಕೂಡ ಆಯಿತು.. ವರ್ಷದಲ್ಲೆ ಅದು ಕೂಡ ಮುರಿದು ಬಿತ್ತು..  ಗೀತಾ ಗೋವಿಂದಂ ಸಿನಿಮಾ ಹಿಟ್ ಆದ ತಕ್ಷಣ  ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿ ನೋಡುತ್ತಿಲ್ಲ ಎಂದೆಲ್ಲಾ ಗಾಸಿಪ್ ಗಳು ಕೇಳಿ ಬರುತ್ತಿದ್ದವು… ಆದರೆ ಇದೀಗ ಈ ಬಗ್ಗೆ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬ್ಲಾಗ್ ಒಂದರಲ್ಲಿ ರಶ್ಮಿಕಾ ಮೇಲೆ ಸ್ಯಾಂಡಲ್ ವುಡ್ ಮುನಿಸಿಕೊಂಡಿದೆ ಎಂಬ ಆರ್ಟಿಕಲ್ ಬಂದಿರುವುದನ್ನು ನೋಡಿ ಸಾನ್ವಿ  ನನಗೆ ಈ ವಿಷಯದ ಬಗ್ಗೆ ಪ್ರೂಫ್ ಕೊಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಸ್ಯಾಂಡಲ್ ವುಡ್ ಗೆ ನನ್ನ ಮೇಲೆ ಬೇಸರವಿದೆ ಎಂದು ನಿಮಗೆ ಯಾರು ಹೇಳಿದ್ದು? ಸುಮ್ಮನೇ ಹೀಗೆಲ್ಲಾ ಸುಖಾಸುಮ್ಮನೆ ಬರೀಬೇಡಿ. ನನಗೆ ಪ್ರೂಫ್ ಕೊಡಿ ನೋಡೋಣ. ನನಗೂ ಯಾರಿಗೆ ಬೇಜಾರಿದೆ ಎಂದು ತಿಳಿದುಕೊಳ್ಳಬೇಕು ಎಂಬ ಕುತೂಹಲವಿದೆ. ಯಾಕೆಂದರೆ ಪ್ರತೀ ಬಾರಿ ನೀವು ಈ ರೀತಿ ಬರೆದಾಗ ಅದಕ್ಕೆ ಅರ್ಥವಿಲ್ಲ. ನಾನು ಇದನ್ನೆಲ್ಲಾ ನಂಬುವುದೂ ಇಲ್ಲ. ನನಗೆ ಪ್ರೂಫ್ ಕೊಡಿ' ಎಂದು ರಶ್ಮಿಕಾ ಟ್ವೀಟ್ ಮೂಲಕ ಲೇಖಕರನ್ನು ಪ್ರಶ್ನೆ ಮಾಡಿದ್ದಾರೆ.. ಏನೇ ಆದರೂ ಆಗಿಂದಾಗಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವುದಂತೂ ಸುಳ್ಳಲ್ಲ.. ಇತ್ತಿಚಿಗೆ ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವ ಮಂದಣ್ಣ ಟ್ರೋಲಿಗರ ಕೈಗೆ ಪದೇ ಪದೇ ಆಹಾರವಾಗುತ್ತಿರುವುದೇ ವಿಪರ್ಯಾಸ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp