ಪತ್ನಿ ಪ್ಯಾಂಟ್  ಕ್ಲೀನ್ ಮಾಡಿ ಹಣೆಗೆ ಮುತ್ತಿಟ್ಟ ಸ್ಟಾರ್ ನಟ...?!!!

01-Feb-2019

ಬಿ ಟೌನ್ ನಲ್ಲಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಮದುವೆಯಾದ ನಂತರ  ಸಿಕ್ಕಾಪಟ್ಟೆ ಟಾಕ್ ಆದ ಸ್ಟಾರ್ ಜೋಡಿ ಅಂದ್ರೆ ಡಿಪ್ಪಿ ಅಲಿಯಾಸ್ ದೀಪಿಕಾ ಮತ್ತು ರಣವೀರ್ ಸಿಂಗ್ ಕಪಲ್. ಮದುವೆಯಾದ ಬಳಿಕ  ಸಿನಿಮಾ ಫೀಲ್ಡ್ ನಿಂದ ಬ್ರೇಕ್ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ.ದೀಪಿಕಾ ಮತ್ತು ರಣವೀರ್ ಇತ್ತೀಚಿಗೆ ರೆಸ್ಟೊರೆಂಟ್ ವೊಂದಕ್ಕೆ ಹೋಗಿ  ವಾಪಸ್ ಬರುವಾಗ  ಮೀಡಿಯಾದವರು ಇವರನ್ನು ಸುತ್ತುವರೆದಿದ್ದಾರೆ. ಒಂದು ಪೋಸ್ ಕೊಡಲು ಬೆಂಬತ್ತಿದ್ದಾರೆ. ಇದೇ ವೇಳೆ ಡಿಪ್ಪಿ ಪ್ಯಾಂಟ್ ಮೇಲೆ  ಇದ್ದ ಕಸ ತೆಗೆದ ರಣವೀರ್ ಆ ನಂತರ ಡಿಪ್ಪಿ ಹಣೆಗೆ ಮುತ್ತಿಕ್ಕಿ ಪೋಸು ಕೊಟ್ಟಿದ್ದಾರೆ. ಸದ್ಯ ಈ  ವಿಡಿಯೋ ಇದೀಗ  ಸಿಕ್ಕಾಪಟ್ಟೆ ವೈರಲ್ ಆಗಿದೆ.

ದೀಪಿಕಾ ತಮ್ಮ ಡಿನ್ನರ್ ಡೇಟ್‍ಗೆ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ನೀಲಿ ಬಣ್ಣದ ಡೆನಿಮ್ ಹಾಕಿದ್ದರು. ತಮ್ಮ ಉಡುಪಿಗೆ ದೀಪಿಕಾ ಬಿಳಿ ಬಣ್ಣದ ಸ್ನೀಕರ್ಸ್ ಧರಿಸಿದ್ದರು. ರಣ್‍ವೀರ್ ಕೆಂಪು ಹಾಗೂ ನೀಲಿ ಬಣ್ಣದ ಟೀ-ಶರ್ಟ್ ಧರಿಸಿ ಅದಕ್ಕೆ ಮರ ಹಾಗೂ ಪ್ರಾಣಿಗಳಿರುವ ಪ್ರಿಂಟೆಡ್ ಶೂ ಹಾಕಿದ್ದರು.ರಣ್‍ವೀರ್ ಹಾಗೂ ದೀಪಿಕಾ ಅವರ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು ಕ್ಯೂಟ್ ಕಪಲ್, ಮೇಡ್ ಫಾರ್ ಈಚ್ ಅದರ್ ಎಂದು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ರಣ್‍ವೀರ್ ನೀನು ಅಮ್ಮಾವ್ರ ಗಂಡ ಆಗಿದ್ದೀಯಾ ಎಂದು ಕಮೆಂಟ್ ಮಾಡಿದ್ದಾರೆ. ಈ ಹಿಂದೆ  ರಣವೀರ್ ಟಿವಿ ಕಾರ್ಯಕ್ರಮವೊಂದರಲ್ಲಿ ನಾನು ಡಿಪ್ಪಿಗೆ ಮೂರು ವಿಚಾರಗಳಿಗೆ ಪ್ರಮಾಣ ಮಾಡಿದ್ದೆ ಅದೇ ರೀತಿ ಮದುವೆಯಾದ ಬಳಿಕವೂ ನಡೆದುಕೊಳ್ಳುತ್ತಿದ್ದೀನಿ ಎಂದು .

ಒಟ್ಟಾರೆ ಕನ್ನಡದ ಸುಂದರಿ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ ಸ್ಟಾರ್ ನಟಿಯರ ಪೈಕಿ ನಂ1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬಹುಕಾಲದ ಗೆಳೆಯ ರಣವೀರ್ ನನ್ನು ಮನೆಯವರ ಒಪ್ಪಿಗೆಯೇ ಮೇರೆಗೆ ಮದುವೆಯಾಗಿದ್ದಾರೆ. ಡಿಪ್ಪಿ ರಣವೀರ್  ಮದುವೆಗೂ ಮುನ್ನ ಈತರದ ಅನೇಕ ನೈಟ್ ಡೇಟ್ ಹೋಗುತ್ತಿದ್ದರು. ಮದುವೆಯ ಬಳಿಕವು ಡಿಪ್ಪಿ ಆಸೆಗೆ ರಣವೀರ್ ಎಂದು ನೋ ಅಂದಿಲ್ಲವಂತೆ… ಬಿಟೌನ್ ನಲ್ಲಿ ಈ ಕ್ಯೂಟ್ ಕಪಲ್ಗೆ ಬಹಳಷ್ಟು ಸ್ಟಾರ್ ಫ್ಯಾನ್ಸ್ ಇದ್ದಾರೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp