ಸ್ಟಾರ್ ಕಪಲ್ ಲವ್ ಬ್ರೇಕ್ ಅಪ್ :  ಈ ವಿಷಯ ಬಿಚ್ಚಿಟ್ಟ ಅಲಿಯಾ ಎಕ್ಷ್ ಬಾಯ್ ಫ್ರೆಂಡ್...!

04-Feb-2019

ಸಿನಿಮಾ ರಂಗವೇ  ಹಾಗೇ, ಇಲ್ಲಿಯೂ ಎಲ್ಲರೂ ಸೆಲೆಬ್ರಿಟಿಗಳೇ ಎಲ್ಲರು ಕಾಂಟ್ರೋವರ್ಸಿಗೆ ಒಳಗಾದವರೇ. ಇಂದು ಇಬ್ಬರು ಡೇಟಿಂಗ್, ಚಾಟಿಂಗ್ ಅಂತಾ ಸುತ್ತಾಡ್ತಿದ್ದ ಕ್ಯೂಟ್ ಸ್ಟಾರ್ ಕಪಲ್ ನಾಳೆ ಬೆಳ್ಳಿಗೆ ಆಗೋದರ ಒಳಗೆ ಬೇರೆ  ಬೇರೆಯಾಗಿ ಬಿಡುತ್ತಾರೆ. ಇಂದು ಇವರೊಂದಿಗೆ ನಾಳೆ ಮತ್ತೊಬ್ಬರು. ಸ್ಟಾರ್ ಇದರಲ್ಲಿ ಹೀರೋ-ಹೀರೋಯಿನ್'ಗಳು ಒಬ್ಬರಿಗಿಂತ ಒಬ್ಬರು ಕಮ್ಮಿಯಿಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳಿಂದಿಡಿದೂ ಸದ್ಯ ಟ್ರೆಂಡಿಂಗ್ ಸೆಲೆಬ್ರಿಟಿಗಳ ತನಕವೂ ಲವ್  ಮತ್ತು ಗಾಸಿಪ್ ಮಾತ್ರ ನಿಂತಿಲ್ಲ. ಇನ್ನೂ ಎಕ್ಸ್ ಬಾಯ್ಫ್ರೆಂಡ್ , ಗರ್ಲ್ ಫ್ರೆಂಡ್ ಅಂತಾ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ಬಿ ಟೌನ್ ಕ್ಯೂಟ್ ಸುಂದರಿ ಅಲಿಯಾ ಭಟ್ ತಮ್ಮ ಮಾಜಿ ಪ್ರಿಯತಮ ಸಿದ್ಧಾರ್ಥ ಮಲ್ಹೋತ್ರ ಜೊತೆ ಬ್ರೇಕ್ ಅಪ್ ಆಗಿ ಎಷ್ಟೋ ದಿನಗಳೇ ಕಳೆದಿವೆ. ಸದ್ಯ ಅದರ ರೀಸನ್ ಈಗ ಹರಿದಾಡುತ್ತಿದೆ.ನಟಿ ಅಲಿಯಾ ಭಟ್ ಸಿದ್ಧಾರ್ಥ್ ಮಲ್ಹೋತ್ರಾ ಲವ್​ ಬರ್ಡ್ಸ್ ಆಗಿ ಸುತ್ತಾಡಿ ಬ್ರೇಕ್​ ಅಪ್​ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ.

ಇದೀಗ ಬ್ರೇಕ್​ ಅಪ್​ ಬಗ್ಗೆ ಸಿದ್ಧಾರ್ಥ ಮಲ್ಹೋತ್ರಾ ಬಾಯಿಬಿಟ್ಟಿದ್ದು, ಆಲಿಯಾ ಜೊತೆಗಿನ ಬ್ರೇಕ್​ ಅಪ್​ ಜೀವನದಲ್ಲಿ ಕಹಿಯ ಘಟನೆ ಎಂದಿದ್ದಾರೆ.  ಅಚಾನಕ್ ಆಗಿ ಬ್ರೇಕ್ ಅಪ್ ಆದ ನಂತರವೂ ಮುಖಾಮುಖಿ ಸಿಕ್ಕಿದ್ದೂ ಇದೆ. ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿದ್ಧಾರ್ಥ್, ನಾವು ನಮ್ಮ ಸಂಬಂಧಕ್ಕೆ ಫುಲ್​ಸ್ಟಾಪ್​ ಇಟ್ಟ ಮೇಲೆ ಮತ್ತೆ ಎಂದೂ ಭೇಟಿ ಮಾಡಿಲ್ಲ. ಆದರೆ ನಾವಿಬ್ಬರು ದೂರವಾಗಿರೋದು ಕಹಿಯಾದ ಸಂಗತಿಯಲ್ಲ. ಇದಾಗಿ ಸ್ವಲ್ಪ ಸಮಯವಾಗಿದೆ. ಡೇಟಿಂಗ್‌​ ಮಾಡುವುದಕ್ಕೂ ಬಹಳ ಸಮಯ ಮುಂಚೆಯೇ ಅವಳು ನನಗೆ ಗೊತ್ತಿದ್ದಳು. ನನ್ನ ಮೊದಲ ಸಿನಿಮಾದ ಮೊದಲ ದೃಶ್ಯವನ್ನು  ಅವಳೊಂದಿಗೆ ಶೂಟ್​ ಮಾಡಿದ್ದೇನೆ. ಆಗ ನಾನು ಕ್ರೇಜಿಯಾಗಿದ್ದೆ. ಅದಕ್ಕೊಂದು ಇತಿಹಾಸವಿದೆ ಎಂದು ಹೇಳಿದ್ದಾರೆ. ನನಗೆ ಅವಳು, ಅವಳಿಗೆ ನಾನು ಹೊಂದಾಣಿಕೆ ಆಗಲು ಸಾಧ್ಯವಾಗಲಿಲ್ಲ. ಲವ್ ಬ್ರೇಕ್ ಅಪ್ ಮಾಡಿಕೊಂಡು ಬೇರೆ ಬೇರೆಯಾದೆವು. ನಾವಿಬ್ಬರು ನಮ್ಮ ನಮ್ಮ ಲೈಫ್ ನಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇವೆ. ಇದೇ ಕಾರಣಕ್ಕಾಗಿ ನಾವಿಬ್ಬರೂ ಒಟ್ಟಾಗಿ ಹೋಗಲು ಸಾಧ್ಯವಾಗಿಲ್ಲ ಅಂತ ಹೇಳಿದ್ದಾರೆ. ಅಂದಹಾಗೇ ಅಲಿಯಾ ಇದೀನ ರಣವೀರ್ ಕಪೂರ್ ಜೊತೆ ಸುತ್ತಾಡುತ್ತಿದ್ದಾರೆ. ಡೇಟಿಂಗ್ ಜೋರಾಗಿದೆ ಎಂಬ ಸುದ್ದಿ ಬಿ ಟೌನ್ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp