ದರ್ಶನ್ ಸಿನಿಮಾದ ಹಾಡಿಗಾಗಿ ಧ್ವನಿಯಾಗುತ್ತಿರುವ ಸರಿಗಮಪ ಹನುಮಂತನ ಸಂಭಾವನೆ ಎಷ್ಟು ಗೊತ್ತಾ..!!

04-Feb-2019

ಅಂದಹಾಗೇ ಸರಿಗಮಪ ವೇದಿಕೆ ಮೇಲೆ ಕುರಿಗಾಯಿ ಹನುಂತಪ್ಪನದ್ದೇ ಸುದ್ದಿ. ಸೋಶಿಯಲ್ ಮಿಡಿಯಾದಲ್ಲಿ ಹನುಮಂತಪ್ಪ ಟ್ರೆಂಡಿಂಗ್ ಹಿರೋ ಆಗಿದ್ದಾರೆ. ಸರಿಗಮಪ ಸ್ಪರ್ಧಿ  ಹನುಮಂತಪ್ಪ ನಿಗೆ ಸರಿಗಮಪ ವೇದಿಕೆಯಿಂದ ಅದೃಷ್ಟ ಖುಲಾಯಿಸಿತು. ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ.  ಅದು ಸ್ಯಾಂಡಲ್’ವುಡ್ನ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಸಿನಿಮಾದಲ್ಲಿ. ಈ ಹಿಂದೆಯೂ ಹನುಮಂತಪ್ಪ  ಸರಿಗಮಪ ವೇದಿಕೆಯಲ್ಲಿಯೇ ಯೋಗರಾಜ್ ಭಟ್ರು ಸಿನಿಮಾದಲ್ಲಿ ಹಾಡುವಂತೆ ಅವಕಾಶ ಕೊಟ್ಟಿದ್ದರು. ಭಟ್ರು ಹಾಡಿಗೆ ಟ್ಯೂನ್ ಮಾಡೋದಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಹೇಳಿದ್ದರು. ಈ ಹಾಡಿಗೆ ಧ್ವನಿಯಾಗಿ ಹನುಮಂತ ಹಾಡಲಿದ್ದಾರೆ.

ಹನುಮಂತಪ್ಪ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಮುಂದಿನ ಚಿತ್ರದಲ್ಲಿ ಹಾಡುತ್ತಾನೆ ಎಂದು ತಿಳಿದುಬಂದಿದೆ. ನಟ ದರ್ಶನ್ ಮುಂದಿನ ಚಿತ್ರ ‘ರಾಬರ್ಟ್’ ಗಾಗಿ ಅರ್ಜುನ್ ಜನ್ಯಾ ಟ್ಯೂನ್ ಮಾಡುತ್ತಿದ್ದಾರೆ. ಈ ಚಿತ್ರ ಒಂದು ಹಾಡಿಗೆ ಯೋಗರಾಜ್ ಭಟ್ರು ಹಾಡು ಬರೆಯಲಿದ್ದಾರೆ ಎನ್ನಲಾಗುತ್ತಿದೆ. ಇದೇ ಹಾಡನ್ನ ಹನುಮಂತನ ಕೈಯಿಂದಲೇ ಹಾಡಿಸಬೇಕು ಎಂದು ಅರ್ಜುನ್ ಜನ್ಯಾ ತೀರ್ಮಾನ ಮಾಡಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಯಾಗುತ್ತಿದೆ.  ಸರಿಗಮಪ ವೇದಿಕೆಯಿಂದ ಕರ್ನಾಟಕದ ಸೆಲೆಬ್ರಿಟಿಯಾದ ಹನುಮಂತಪ್ಪ ದಾಖಲೆ ಬರೆದಿದ್ದಾರೆ.  ಎಲ್ಲಾ ಸ್ಪರ್ಧಿಗಳಿಗೂ ಇಂತಿಷ್ಟು ಸಂಭಾವನೆ ಪಡೆಯುತ್ತಿದ್ದರು. ಆರಂಭದಲ್ಲಿ 10 ಸಾವಿರ ಸಂಭಾವನೆ ಪಡೆಯುತ್ತಿದ್ದ ಹನುಮಂತಪ್ಪ ಸದ್ಯ 25 ಸಾವಿರದಿಂದ 30 ಸಾವಿರಕ್ಕೆ ಏರಿಕೆಯಾಗಿದೆ

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp