ಯಂಗ್ ರೆಬಲ್’ಗೆ ಶುಭಕೋರಿದ ಅಭಿನಯ ಚಕ್ರವರ್ತಿ..! ಕಾರಣ ಏನ್ ಗೊತ್ತಾ..?

05-Feb-2019

ಸ್ಯಾಂಡಲ್’ವುಡ್ನಲ್ಲಿ ಈಗಾಗಲೇ ಸಾಕಷ್ಟು ಭರವಸೆಯ ನಾಯಕರಿದ್ದಾರೆ.. ಇವರ ಸಾಲಿಗೆ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಮಗ ಕೂಡ ಸೇರಿಕೊಳ್ಳುತ್ತಾರೆ ಎಂಬುದು ಗಾಂಧಿನಗರದ ಮಾತಾಗಿದೆ.. ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್'…. ಈ ಅಮರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಎಲ್ಲರೂ ಕೂಡ ಇಟ್ಟುಕೊಂಡಿದ್ದಾರೆ.  ಪ್ರೇಮಿಗಳ ದಿನಕ್ಕೆ ಸರ್ಪ್ರೈಸ್ ನೀಡುತ್ತಿದೆ. ಫೆಬ್ರವರಿ 14 ರಂದು ಅಮರ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್ ವುಡ್ ಗೆ ಇದು ಸ್ಪೆಷಲ್ ಆಗಿದೆ.ಅಂಬರೀಶ್ ಅವರ ಇಲ್ಲದ ಸಮಯದಲ್ಲಿ ಅಮರ್ ಟೀಸರ್ ಬರ್ತಿದ್ದು, ಅಂಬಿ ಪುತ್ರನ ಸ್ವಾಗತಕ್ಕೆ ಸಿನಿರಸಿಕರು ಸಿದ್ದರಾಗಿದ್ದಾರೆ.

ಈ ವಿಷಯ ತಿಳಿದಂತೆ ತಿಳಿದ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಅಭಿಷೇಕ್ ಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ... 'ಯಂಗ್ ರೆಬೆಲ್ ಅಭಿಗೆ ಸ್ವಾಗತ, ಒಳ್ಳೆಯದಾಗಲಿ' ಎಂದು ಸುದೀಪ್ ಟ್ವೀಟ್ ಮೂಲಕ ಶುಭಾಷಯ ತಿಳಿಸಿದ್ದಾರೆ. ಇನ್ನುಳಿದಂತೆ ಫೆಬ್ರವರಿ 14 ರಂದು ಆನಂದ್ ಆಡಿಯೋ ಮೂಲಕ ಅಮರ್ ಟೀಸರ್ ತೆರೆಕಾಣುತ್ತಿದೆ.ನಾಗಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ತಾನ್ಯ ಹೋಪ್ ಯಂಗ್ ರೆಬಲ್ ಜೊತೆ ನಟಿಸಿದ್ದಾರೆ. ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಅಮರ್ ಚಿತ್ರತಂಡ ಸದ್ಯ ಟೀಸರ್ ರಿಲೀಸ್ ಮಾಡಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ವರ್ಷದಲ್ಲೇ ಅಮರ್ ಸಿನಿಮಾ ತೆರೆಗೆ ಬರಲಿದೆ.. ಯಂಗ್ ರೆಬಲ್ ಸ್ಟಾರ್ ಅನ್ನು ನೋಡಲು ರೆಬಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಗನ ಸಿನಿಮಾ ನೋಡಲು ಅಪ್ಪ ಿರಬೇಕಾಗಿತ್ತು ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp