'ಬಿಗ್ ಬಾಸ್’ ಕಾರ್ಯಕ್ರಮ ಹೋಸ್ಟ್ ಮಾಡುತ್ತಿರುವವರಿಗೆ ಇಷ್ಟೊಂದು ಸಂಭಾವನೆನಾ.?

06-Feb-2019

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ ರಿಯಾಲಿಟಿ ಷೋ ಅಂದರೆ ಅದು ಬಿಗ್ ಬಾಸ್..ಕನ್ನಡವಷ್ಟೆ ಅಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ಸಿಕ್ಕಾಪಟ್ಟೆ ಹೆಸರು ಮಾಡಿದೆ…ಅದೇ ರೀತಿ ತೆಲುಗು ಕಿರುತೆರೆಯಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದ 2 ಸೀಸನ್ ಗಳು ಈಗಾಗಲೇ ಮುಕ್ತಾಯವಾಗಿವೆ… . ತೆಲುಗಿನ ಬಿಗ್ ಬಾಸ್ ನ ಮೊದಲನೇ ಸೀಸನ್ ನ ಜೂ.ಎನ್.ಟಿ.ಆರ್ ನಡೆಸಿಕೊಟ್ಟಿದ್ದರೆ, ಎರಡನೇ ಸೀಜನ್ ಅನ್ನು ನಾನಿ ಹೋಸ್ಟ್ ಮಾಡಿದ್ದರು.. ಸದ್ಯದಲ್ಲೇ 'ಬಿಗ್ ಬಾಸ್ ತೆಲುಗು' ಮೂರನೇ ಆವೃತ್ತಿಯ ಪ್ರೀ-ಪ್ರೊಡಕ್ಷನ್ ಕಾರ್ಯಗಳ ಕೆಲಸ ಪ್ರಾರಂಭವಾಗಿದೆ.,

ನಿರೂಪಕರ ಆಯ್ಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.. ವರದಿಗಳ ಪ್ರಕಾರ ಸ್ಟಾರ್ ಮಾ ವಾಹಿನಿ 'ಬಿಗ್ ಬಾಸ್ ತೆಲುಗು-3'ನೇ ಸೀಸನ್ ಗೆ ಜೂ.ಎನ್.ಟಿ.ಆರ್ ರನ್ನೇ ನಿರೂಪಕರನ್ನಾಗಿ ಕರೆತರಲು ನಿರ್ಧಾರ ಮಾಡಿದೆ.. ಇದಕ್ಕಾಗಿ ಬೃಹತ್ ಸಂಭಾವನೆಯನ್ನೇ ಕೋಟ್ ಮಾಡಿದೆ. ವರದಿಗಳ ಪ್ರಕಾರ ಬಂದ ಮಾಹಿತಿಯನ್ನು ನೋಡುವುದಾದರೆ ಜೂ.ಎನ್.ಟಿ.ಆರ್ ಗೆ ದೊಡ್ಡ ಮೊತ್ತವನ್ನೇ ಸಂಭಾವನೆ ರೂಪದಲ್ಲಿ ನೀಡಲು ಸ್ಟಾರ್ ಮಾ ವಾಹಿನಿ ಸಜ್ಜಾಗಿದೆ. 'ಬಿಗ್ ಬಾಸ್' ಮೇಕರ್ಸ್ ಜೂ.ಎನ್.ಟಿ.ಆರ್ ಗೆ 20 ಕೋಟಿ ರೂಪಾಯಿ ನೀಡಲು ಮನಸ್ಸು ಮಾಡಿದ್ದಾರಂತೆ.'ಬಿಗ್ ಬಾಸ್' ತೆಲುಗು ಮೊದಲ ಸೀಸನ್ ನಾ ಹೋಸ್ಟ್ ಮಾಡಲು ಜೂ.ಎನ್.ಟಿ.ಆರ್ ಬರೋಬ್ಬರಿ 14 ಕೋಟಿ ಸಂಭಾವನೆ ಪಡೆದಿದ್ದರು. ಇದೀಗ ಮೂರನೇ ಸೀಸನ್ ಗೆ ಜೂ.ಎನ್.ಟಿ.ಆರ್ 6 ಕೋಟಿ ಹೆಚ್ಚಿಗೆ ಪಡೆಯುವ ಸಾಧ್ಯತೆ ಇದೆ.ಒಟ್ಟಿನಲ್ಲಿ ಬಿಗ್ ಬಾಸ್ ನಿಂದಾಗಿ ಸ್ಟಾರ್’ಗಳಿಗೆ ಒಳ್ಳೊಳ್ಳೆ ಸಂಭಾವನೆ ಸಿಗುತ್ತಿರುವುದಂತು ಸುಳ್ಳಲ್ಲ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp