ಭಿಕ್ಷುಕಿ ಎಂದು ಹಣ ಕೊಟ್ಟ ನಟ ನಂತರ ಆಕೆ ಯಾರೆಂದು ಗೊತ್ತಾಗಿ ಶಾಕ್..? ಆ ನಟ ಯಾರ್ ಗೊತ್ತಾ..?

07-Feb-2019

ಕೆಲವೊಂದು ಘಟನೆಗಳು ನಮ್ಮ ಮನಸ್ಸಿಗೆ ನಾಟುವಂತೆ ಮಾಡಿಬಿಡುತ್ತವೆ.. ನಮ್ಮ ಕಣ್ಣಮುಂದೆಯೇ ಈ ರೀತಿಯ ಘಟನೆಗಳು ನಡೆದರೆ ಅದರ ನೆನಪಿನಿಂದ ಹೊರಬರುವುದು ಸ್ವಲ್ಪ ಕಷ್ಟವೇ ಸರಿ.. ಈ ರೀತಿಯ ಘಟನೆಯೊಂದು ಸ್ಟಾರ್ ನಟನ ಮುಂದೆ ನಡೆದುಹೋಗಿದೆ.. , ಟಾಪ್ ನಟನ ಶೂಟಿಂಗ್ ಸೆಟ್ ಗೆ ಒಬ್ಬ ವೃದ್ಧ ಮಹಿಳೆ ಬರುತ್ತಾಳೆ, ಆಕೆಯನ್ನು ನೋಡಿ ಪಾಪ ಬಿಕ್ಷುಕಿ ಎಂದುಕೊಂಡು ಆಕೆಗೆ ಹಣ ಕೊಡುತ್ತಾನೆ ಆ ನಟ, ಆದ್ರೆ ನಂತರ ನಡೆದದ್ದು ಮಾತ್ರ ಕಣ್ಣೀರಿನ ಕಥೆ.. ಆ ಘಟನೆಯನ್ನು ಕಣ್ಣಾರೆ ಕಂಡ ಯಾರೊಬ್ಬರು ಕೂಡ ನೊಂದುಕೊಳ್ಳದೇ ಇರಲಾರರು..

ದಕ್ಷಿಣ ಭಾರತದಲ್ಲಿಯೇ ತನ್ನ ಸಹಜ ನಟನೆಯು ಮೂಲಕ ಟಾಪ್ ನಟನಾಗಿ ಬೆಳೆದವರು ವಿಜಯ್ ಸೇತುಪತಿ, ಈತ ಒಬ್ಬ ಹೃದಯವಂತ ಅಂತ ಎಲ್ಲಾರಿಗೂ  ಕೂಡ ಗೊತ್ತಿತುವ ವಿಷಯ.., ಈ ನಟ  ಕೈ ಚಾಚಿದವರಿಗೆ ಬರಿಗೈಯಲ್ಲಿ ಕಳಿಸುವುದಿಲ್ಲ ಈ ನಟ.. ಆದರೆ ಈ ಘಟನೆ ಎಲ್ಲದಕ್ಕಿಂತ ವಿಭಿನ್ನ ಎನಿಸಬಹುದು.. ವಿಜಯ್ ಸೇತುಪತಿ ನಟಿಸುತ್ತಿರುವ ಮಾಮನೀಥನ್ ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆಯುತ್ತಿತ್ತು, ಆಗ ಅಲ್ಲಿಗೆ ಬಂದ ಒಬ್ಬ ವೃದ್ಧ ಮಹಿಳೆ, ನನಗೆ ಆರೋಗ್ಯ ಚೆನ್ನಾಗಿಲ್ಲ, ಔಷಧಿ ಕೊಂಡುಕೊಳ್ಳಲು ಹಣ ಇಲ್ಲ ಎಂದಾಗ ವಿಜಯ್ ಸೇತುಪತಿ ಹೃದಯ ಮರುಗಿದೆ., ತಕ್ಷಣ ತನ್ನ ಕೈಗೆ ಸಿಕ್ಕಷ್ಟು ಹಣವನ್ನು ಆ ವೃದ್ಧ ಮಹಿಳೆಗೆ ಕೊಟ್ಟಿದ್ದಾರೆ.. ಹಣ ತೆಗೆದುಕೊಂಡ ಮಹಿಳೆ ಕೆಲವೇ ನಿಮಿಷಗಳಲ್ಲಿ ಅಲ್ಲೇ ಕುಸಿದು ಬಿದ್ದಳು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು., ಅಷ್ಟರೊಳಗೆ ಆ ಮಹಿಳೆ ಸಾವನ್ನಪ್ಪಿದ್ದಳು, ಮಹಿಳೆಯ ಸಾವಿನ ಸುದ್ಧಿ ತಿಳಿದು ಕಣ್ಣೀರು ಹಾಕಿದರು ವಿಜಯ್ ಸೇತುಪತಿ, ಆನಂತರ ಆ ನಟನಿಗೆ ತಿಳಿದಿದ್ದು ಏನ್ ಗೊತ್ತಾ.? ಆ ವೃದ್ಧ ಮಹಿಳೆ ಒಂದು ಕಾಲದಲ್ಲಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ನಟಿ ಎಂದು ಆಕೆಯ ಹೆಸರು ಕವಲಂ ಅಚ್ಚಮ್ಮ. ಸುಮಾರು ಮಲಯಾಳಂ ಚಿತ್ರಗಳಲ್ಲಿ ಸಹ ನಟಿಯಾಗಿ ಈ ಕವಲಂ ಅಚ್ಚಮ್ಮ ನಟಿಸಿದ್ದರು, ನಂತರ ಅವಕಾಶಗಳು ಇಲ್ಲದೆ ಬಿಕ್ಷೆ ಬೇಡಿ ಬದುಕುತ್ತಿದ್ದರು, ಕಲಾವಿದರಿಗೆ ಈ ರೀತಿಯ ಪರಿಸ್ಥಿತಿ ಬರುತ್ತಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp