ಕೆಜಿಎಫ್2 ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಸಂಜಯ್ ದತ್...?

11-Feb-2019

ಸ್ಯಾಂಡಲ್’ವುಡ್ ನಲ್ಲಿ ಬಹಳ ವರ್ಷಗಳಿಂದ ನಿರೀಕ್ಷೆ ಹುಟ್ಟಿಸಿದ ಚಿತ್ರ ಕೆಜಿಎಫ್ ಬಿಡುಗಡೆಯಾದ ದಿನದಿಂದಲೂ ಸಿನಿರಸಿಕರಿಂದ ಜೈ ಎನಿಸಿಕೊಂಡಿದೆ.. ... ಸುಮಾರು ಎರಡು ವರ್ಷಗಳ ಬಳಿಕ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಅದ್ದೂರಿ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಜಯ್ ಕಿರಂಗದೂರು ನಿರ್ಮಾಣದ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಶ್ರೀನಿಧಿ ಶೆಟ್ಟಿ, ಅಚ್ಯುತಕುಮಾರ್, ಮಾಳವಿಕಾ ಅವಿನಾಶ್, ಅನಂತನಾಗ್, ವಸಿಷ್ಟ ಸಿಂಹ ಮೊದಲಾದವರು ನಟಿಸಿದ್ದಾರೆ. ಇದೀಗ ಕೆಜಿಎಫ್ ಚಿತ್ರತಂಡದಿಂದ ಮತ್ತೊಂದು ಸುದ್ದಿ ಕೇಳಿ ಬಂದಿದೆ. ಈ ಸಿನಿಮಾ ಗಡಿ ದಾಟಿ ಪಾಕ್ ನಲ್ಲೂ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಕೆಜಿಎಫ್ ಸಕ್ಸಸ್ ಈಗ ಮತ್ತೆ ಕೆಜಿಎಫ್-2 ಮಾಡಲು ಸ್ಪೂರ್ತಿ ಸಿಕ್ಕಿದೆ.ಕೆಜಿಎಫ್ ಚಾಪ್ಟರ್ 1 ಹೊಸ ಹವಾ ಎಬ್ಬಿಸಿದ ನಂತರ ಇದೀಗ ಕೆಜಿಎಫ್ 2 ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಂದಹಾಗೇ ಕೆಜಿಎಫ್-2 ಮತ್ತಷ್ಟು ನಿರೀಕ್ಷೆಗಳನ್ನು ಮೂಡಿಸಲಿದೆಯಂತೆ.

ಎಲ್ಲೆಡೆ ಸದ್ದು ಮಾಡಿದ ಕನ್ನಡಿಗರ ಬಹುಭಾಷಾ ಚಲನಚಿತ್ರವಾದ "ಕೆಜಿಎಫ್" ಮುಂದಿನ ಭಾಗ ಮೂಡಿ ಬರಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.. ಆದರೆ ಇದರ  ವಿಶೇಷವೆಂದರೆ ಅದರ ಎರಡನೇ ಭಾಗದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಇರಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರಲಿದೆ. ಕೆಜಿಎಫ್ ಎರಡನೇ ಭಾಗ ಆಗಲೇ ಸಖತ್ ಸದ್ದು ಮಾಡುವಂತೆ ಮಾಡಿದೆ. ಕೆಜಿಎಫ್ ಸರಣಿಯ ಮುಂದಿನ ಚಿತ್ರದಲ್ಲಿ ಸಂಜಯ್ ದತ್ ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಹಾಕಿಕೊಳ್ಳಲು ನಿರ್ಮಾಪಕರು ಒಲವು ತೋರಿದ್ದು, ಈಗಾಗಲೇ ಆ ಬಗ್ಗೆ ಮಾತುಕತೆ ನಡೆಯತ್ತಿದೆ ಎಂದು ಹೇಳಲಾಗುತ್ತಿದೆ.ಆದರೆ ಅವರಿಗೆ ಯಾವ ಪಾತ್ರ ಹಾಗೂ ಆ ಚಿತ್ರದಲ್ಲಿ ಇನ್ನೂ ಯಾರ್ಯಾರು ಇರಲಿದ್ದಾರೆ ಎಂಬ ಮಾಹಿತಿ ತಿಳಿಸಿಲ್ಲ... ಒಟ್ಟಿನಲ್ಲಿ ಇದೇ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿರುವ 'ಕೆಜಿಎಫ್-2' ಈಗಲೇ ಕುತೂಹಲ ಕೆರಳಿಸಲು ಶುರು ಮಾಡಿದೆ. ಯಶ್ ಅಭಿಮಾನಿಗಳಿಗೆ ಮತ್ತೊಂದು ಪುಲ್ ಮೀಲ್ಸ್ ಸೀಗೊದರಲ್ಲಿ ನೋ ಡೌಟ್..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp