‘ಯಜಮಾನ’ದಲ್ಲಿ ನಾನು ವಿಲನ್ ಅಲ್ಲ ಎಂದ ಡಾಲಿ ಧನಂಜಯ್

12-Feb-2019

ಚಂದನವನದಲ್ಲಿ ಟಗರು ಸಿನಿಮಾ ಬಂದ ಮೇಲೆ ಸಾಕಷ್ಟು ಕಲಾವಿದರು ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ರು.. ಅದರಲ್ಲಿ ಧನಂಜಯ್ ಕೂಡ ಒಬ್ಬರು. ಕೇವಲ ಧನಂಜಯ್ ಆಗಿದ್ದ ಈ ನಟ ಸಿನಿಮಾ ಟಗರು ಸಿನಿಮಾದ ನಂತೆ ಡಾಲಿ ಧನಂಜಯ್ ಅಂತಾನೇ ಫೇಮಸ್ ಆಗಿಬಿಟ್ಟರು.. ಆ ಸಿನಿಮಾದ ನಂತರ ಧನಂಜಯ್ ಗೆ ಒಳ್ಲೇ ನೇಮು ಫೇಮು ಎಲ್ಲವೂ ಕೂಡ ಸಿಕ್ಕಿತ್ತು.. ಇದೀಗ ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ನ ಭೈರವನ ಅವತಾರವನ್ನು ನೋಡಿ ಅಭಿಮಾನಿಗಳು ಬೆಕ್ಕರ ಬೆರಗಿದ್ದಾರೆ..ನಿನ್ನೆ ಮೊನ್ನೆವರೆಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಭೈರವ ಇದ್ದಕ್ಕಿದ್ದ ಹಾಗೆ ಈಗ ದಿಢೀರನೇ ಹಾಟ್ ಭೈರವನಾಗಿ ಎಂಟ್ರಿ ಕೊಟ್ಟಿದ್ದರು..

ಆದರೆ ಇದೀಗ ಹೊಸ ಸಮಾಚಾರ ಏನ್ ಗೊತ್ತಾ..? 'ಡಾಲಿ' ಹೆಸರಿನಲ್ಲೇ ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಯೋಗೇಶ್ ನಿರ್ಮಾಣ ಮಾಡುತ್ತಿರುವ ಚಿತ್ರ ಇದೇ ವಾರದಲ್ಲಿ ಟೈಟಲ್ ಲಾಂಚ್ ಮಾಡಿಕೊಳ್ಳುವ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಸ್ಕ್ರಿಪ್ಟ್ ವರ್ಕ್ ಭರದಿಂದ ಸಾಗುತ್ತಿದ್ದು, ನಾಯಕಿಯ ಹುಡುಕಾಟ ನಡೆದಿದೆ. ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ಮೇನ್ ವಿಲನ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ವತಃ ಸ್ಪಷ್ಟನೆ ನೀಡಿದ ಧನಂಜಯ್ 'ನನ್ನದು ಬಹಳ ಮುಖ್ಯವಾದ ಪಾತ್ರ. ಆದರೆ ವಿಲನ್  ಆಗಿ ಅಲ್ಲ. ಮಿಠಾಯಿ ಸೂರಿಯಾಗಿ ಚಿತ್ರದಲ್ಲಿ ಸ್ವಲ್ಪ ಸಮಯ ಬಂದು ಹೋದರೂ ಬಹಳ ಪ್ರಾಮುಖ್ಯತೆ ನನ್ನ ಪಾತ್ರಕ್ಕೆ ಇದೆ' ಎಂದು ಡಾಲಿ ಧನಂಜಯ್ ಹೇಳಿದ್ದಾರೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp