ರಾಕಿಂಗ್ ಸ್ಟಾರ್ ಆ ಪಾತ್ರ ಮಾಡಲಿಲ್ಲವೆಂದರೆ ನನ್ನ ಕನಸಿನ ಸಿನಿಮಾವೇ ಬ್ಯಾನ್ ಎಂದ ಯಂಗ್ ನಿರ್ದೇಶಕ..!!!

13-Feb-2019

ಇತ್ತೀಚೆಗೆ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದ ಸುದ್ದಿಯಾಗುತ್ತಿವೆ. ರಾಷ್ಟ್ರವ್ಯಾಪಿ ಸಿನಿಮಾಗಳು ರಿಲೀಸ್ ಆಗಿ ಪರಭಾಷಿಗರನ್ನು ಸೆಳೆಯುತ್ತಿವೆ. ಒಟ್ಟಾರೆ ಬಾಕ್ಸ್ ಆಫೀಸ್ ಸುಲ್ತಾನರ ಬಿಗ್ ಬಜೆಟ್ ಸಿನಿಮಾಗಳು ಗಲ್ಲಾಪೆಟ್ಟಿಗೆ ತುಂಬಿಸಿದ್ದಲ್ಲದೇ ಅನೇಕ ದಾಖಲೆಗಳನ್ನು ಬರೆದಿವೆ. ಕನ್ನಡ ಸಿನಿಮಾ ಇಂಡಸ್ಟ್ರಿ ಬಾಲಿವುಡ್ ನಲ್ಲಿ ಸದ್ದಾಗುತ್ತಿದೆ. ಸದ್ಯ ಯಶ್, ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ , ಶಿವರಾಜ್ ಕುಮಾರ್ ಹವಾ ಜೋರಾಗಿಯೇ ಇದೆ. ಅದರಲ್ಲೂ ಎರಡು ವರ್ಷಗಳ ಸತತ ಪರಿಶ್ರಮದಿಂದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ದೊಡ್ಡ ಮಟ್ಟದ ಸಕ್ಸಸ್ ಕಂಡಿತು. ಯಶ್ ಲಕ್ ಕೂಡ ಬದಲಾಯ್ತು. ಬಾಲಿವುಡ್’ನ ಖ್ಯಾತ ನಟರು ಕಿರಾತಕನನ್ನು ನೋಡುವಂತಾಯ್ತು. ಇದರ ಹಿದೆ ಕೆಜಿಎಫ್ 2 ಕೂಡಆರಂಭವಾಗಿದೆ.ರಾಕಿಂಗ್ ಸ್ಟಾರ್ ಯಶ್ ಅವರಿಗಾಗಿಯೇ ‘ರಾಣಾ’ ಚಿತ್ರಕಥೆ ಬರೆದಿದ್ದೇನೆ,  ಒಂದು ವೇಳೆ ಅವರು ಆ ಪಾತ್ರದಲ್ಲಿ ಮಾಡಲಿಲ್ಲ ಎಂದಾದರೇ ಆ ಚಿತ್ರವನ್ನೇ ಮಾಡುವುದಿಲ್ಲ ಎಂದು ನಿರ್ದೇಶಕ ಎ.ಹರ್ಷ ಹೇಳಿದ್ದಾರೆ.

ಎ. ಹರ್ಷ ನಿರ್ದೇಶನದಲ್ಲಿ ಮೂಡಿಬರಲಿರುವ ‘ರಾಣಾ’ ಚಿತ್ರದಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ನಟಿಸಲಿದ್ದಾರೆ. ಆ ಚಿತ್ರವನ್ನು ಜಯಣ್ಣ ನಿರ್ಮಿಸಲಿದ್ದಾರೆ ಎಂಬ ಸುದ್ದಿ ವರ್ಷಗಳ ಹಿಂದೆಯೇ ಸದ್ದು ಮಾಡಿತ್ತು.  ಆದರೆ ಇದರ ಮಧ್ಯೆ ಗಾಸಿಪ್ ಅಲೆಯೊಂದು ಎದ್ದಿತು. ರಾಣಾ ಸಿನಿಮಾವನ್ನು ಶಿವರಾಜ್ ಕುಮಾರ್ ಮಾಡ್ತಾ ಇದ್ದಾರೆ. ಹರ್ಷ ಅದಾಗಲೇ ಶಿವಣ್ಣನಿಗೆ ಕಥೆ ಹೇಳಿ ಒಪ್ಪಿಸಿದ್ದಾರೆ ಅಂತಾ. ಈ ತಳಬುಡವಿಲ್ಲದ ಸುದ್ದಿಗೆ ಸ್ವತಃ ನಿರ್ದೇಶಕ ಹರ್ಷ ಪೂರ್ಣವಿರಾಮ ಇಟ್ಟಿದ್ದಾರೆ. ‘ಯಶ್ ಜತೆ ‘ರಾಣಾ’ ಸಿನಿಮಾ ಆಗುವುದು ನೂರಕ್ಕೆ ನೂರು ನಿಜ. ಯಶ್ ಅವರೇ ನಾಯಕರಾಗಿ ನಟಿಸಲಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಕೇಳಿಬರುತ್ತಿರುವ ಸುದ್ದಿಯಲ್ಲಿ ಯಾವುದೇ ತಿರುಳಿಲ್ಲ ಎಂದು ಹೇಳಿದ್ದಾರೆ.  ಆದರೆ ಇದರ ಬಗ್ಗೆ ಕನ್ಫರ್ಮ್ ಆಗಿ ಮಾತನಾಡಿದ ಹರ್ಷ, ಯಶ ಸಿನಿಮಾ ಕೆಜಿಎಫ್-2 ಸದ್ಯ ಬ್ಯುಸಿಯಾಗಿದೆ. ಅದರಲ್ಲಿ ಯಶ್  ಭಾಗೀಯಾಗಿದ್ದಾರೆ. ವರ್ಷಾಂತ್ಯದಲ್ಲಿ ಆ ಕೆಲಸಗಳು ಮುಗಿದ್ರೆ ನಂತರ ನಮ್ಮ ಸಿನಿಮಾದಲ್ಲಿ ಪಾಲ್ಗೊಳ್ಳುತ್ತಾರೆ. ಯಶ್ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಆ ಭರವಸೆ ಇದೆ. ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೇ ನಾನು ಸಿನಿಮಾ ಕೆಲಸಗಳನ್ನು ಮಾಡಲು ಶುರು ಮಾಡುತ್ತೇನೆ ಎಂದರು. ಅದರ ಜೊತೆ ಹರ್ಷ, ಶಿವಣ್ಣನ ದೊಡ್ಡಅಭಿಮಾನಿ ನಾನು. ಅವರೊಬ್ಬ ವಿಶ್ವಕೋಶ. ಬೇರೆ ನಟನಿಗಾಗಿ ಮಾಡಿದ ಸಿನಿಮಾವನ್ನು ಶಿವಣ್ಣ ಕೈಯಲ್ಲಿ ಮಾಡಿಸಲ್ಲ. ಅವರಿಗಾಗಿಯೇ ಮತ್ತೊಂದು ಕಥೆ ರೆಡಿ ಮಾಡುತ್ತೇನೆ ಎಂದರು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp