ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ನಟನೆಯ 'ಅಮರ್' ಟೀಸರ್ ಬಿಡುಗಡೆ..

14-Feb-2019

ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ನೋಡಿದರೆ ರೆಬಲ್ ಸ್ಟಾರ್ ಅಂಬರೀಶ್ ನೋಡಿದ ಹಾಗೇಯೆ ಅನಿಸುತ್ತದೆ.. ಬಹು ದಿನಗಳಿಂದಲೂ ಕೂಡ ಅಭಿಮಾನಿಗಳು ಕಾಯುತ್ತಿದ್ದರು..  ಅಂಬರೀಷ್ ಪುತ್ರ ಅಭಿಷೇಕ್ ಮೊದಲ ಬಾರಿ ಹೀರೋ ಆಗಿ ಅಮರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ., ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕ ಎಂದು ಹೆಸರುವಾಸಿಯಾಗಿರುವ ನಾಗಶೇಖರ್ ಈ ಚಿತ್ರದ ಚಿತ್ರೀಕರಣದ ಹೊಣೆ ಹೊತ್ತಿಕೊಂಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಮೊದಲ ಚಿತ್ರ ಇದಾಗಿರುವುದರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.. ಸ್ಯಾಂಡಲ್ ವುಡ್ನ ಬಹು ನಿರೀಕ್ಷಿತ ಸಿನಿಮಾವಾದ ‘ಅಮರ್’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್  ಬೈಕ್ ರೇಸರ್ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದು ತಾನ್ಯಾ ಹೋಪ್ ಸ್ಕ್ರೀನ್ ಷೇರ್ ಮಾಡಿದ್ದಾರೆ. ಇನ್ನು ಉಳಿದಂತೆ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಸತ್ಯಾ ಹೆಗ್ಡೆ ಅವರ ಕ್ಯಾಮೆರಾ ಕೈಚಳಕ ಕೂಡ ಈ ಸಿನಿಮಾಕ್ಕೆ ಇದೆ.. ಮಗನ ಸಿನಿಮಾವನ್ನು ನೋಡಲು ಅಪ್ಪನೇ ಇಲ್ಲ ಎನ್ನುವುದು ಅಭಿಮಾನಿಗಳಿಗೂ ಮತ್ತು ಸಿನಿ ರಂಗಕ್ಕೂ ಬೇಸರದ ವಿಷಯವಾಗಿದೆ ಎನ್ನಬಹುದು.. ಈ ಸಿನಿಮಾದ ಟೀಸರ್ ಪ್ರೇಮಿಗಳ ದಿನದಂದು ಬಿಡುಗೆಡೆಯಾಗಿದ್ದು ಈಡೀ ಚಿತ್ರತಂಡವೇ ಅಮರ್ ಶುಭಾಷಯ ತಿಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ದಂಪತಿ  ಜೂನಿಯರ್ ಸ್ಟಾರ್ ಒಬ್ಬರಿಗೆ ಮೆಸೇಜ್ ಮಾಡಿ ಕಂಗ್ರಾಟ್ಸ್ ಹೇಳಿದ್ದಾರೆ.ಅವರನ್ನು ಪ್ರೀತಿಯಿಂದ ಪುಟ್ಟ ಎಂದು ಕರೆದು ಕಮೆಂಟ್ ಮಾಡಿದ್ದಾರೆ. ಇಂದು ರೆಬೆಲ್ ಸ್ಟಾರ್ ಅಂಬಿ ಅವರ ಮಗ ಅಭಿಷೇಕ್ ಅಭಿನಯದ ಅಮರ್ ಸಿನಿಮಾ ಟೀಸರ್ ಬಿಡುಗಡೆ ಆಗಿದೆ.. ಎಲ್ಲರು ನೋಡಿ ಅರಸಿ ಎಂದಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp