ನಟನೆಗಾಗಿ ಡೆಲ್ ಕಂಪನಿಯ ಕೆಲಸವನ್ನೇ ಬಿಟ್ಟು ಬಂದ ನಟಿ..! ಯಾರ್ ಗೊತ್ತಾ..?

15-Feb-2019

ಸಿನಿಮಾ ಜಗತ್ತು ಕೆಲವೊಮ್ಮೆ ಕೆಲವರನ್ನು ಅಷ್ಟೆ ಕೈ ಬೀಸಿ ಕರೆಯುತ್ತದೆ.. ಬಣ್ಣ ಹಚ್ಚಿದವರನ್ನೆಲ್ಲಾ ಅದೃಷ್ಟ ಕೈ ಹಿಡಿಯುವುದಿಲ್ಲ…ಕೆಲವರು ಸಿನಿಮಾಗಾಗಿ ಇರೋ ಒಳ್ಳೊಳ್ಳೆ ಕೆಲಸಗಳನ್ನು ಬಿಟ್ಟು ಬಿಡುತ್ತಾರೆ. ಈ ರೀತಿಯ  ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಒಂದು ವೇಳೆ ಅದೃಷ್ಡ ಕೈ ಕೊಟ್ಟರೆ ಅದು ಇಲ್ಲ ಇದು ಇಲ್ಲ ಎನ್ನುವ ರೀತಿ ಆಗುತ್ತದೆ ಅದೇ ರೀತಿ ಮತ್ತೊಬ್ಬ ನಟಿ ಸಿನಿಮಾದ ನಟನೆಗಾಗಿ ತನ್ನ ಕೆಲಸವನ್ನು ಬಿಟ್ಟಿದ್ದಾರೆ. ಅದು ಯಾವ ಕೆಲಸ ಗೊತ್ತಾ..? ಡೆಲ್ ಕಂಪನಿಯ ಕೆಲಸ..

ಇತ್ತಿಚಿಗೆ ಟ್ರೇಲರ್‌ನಿಂದಲೇ ಗಮನ ಸೆಳೆದಿರುವ 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾಗಾಗಿ ನಾಯಕಿ ಸಂಜನಾ ಕೆಲಸ ಬಿಟ್ಟಿದ್ದಾರಂತೆ.  ಕೊಡಗು ಮೂಲದವರಾದ ಇವರು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ. ಕಂಪ್ಯೂಟರ್‌ ಸೈನ್ಸ್‌ ಓದಿ ಮುಗಿಸಿ ಡೆಲ್‌ ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದೇನೆ. ಇಲ್ಲಿ ಕೆಲಸ ಮಾಡುವಾಗಲೇ ನನಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದ್ದು ಸಿನಿಮಾಗಾಗಿಯೇ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದೆ. ನನ್ನ ಸ್ನೇಹಿತರೊಬ್ಬರು ನಿರ್ದೇಶಕರಾಗಲು ಕಿರು ಚಿತ್ರ ಮಾಡುವಾಗ ಅದರಲ್ಲಿ ನನ್ನ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಈ ಚಿತ್ರಕ್ಕಾಗಿ ಶೂಟ್‌ ಮಾಡಿದ್ದ ಪ್ರೋಮೊ ಯೂಟ್ಯೂಬ್‌ನಲ್ಲಿ ಹಾಕಿದ್ದರು. ಅದನ್ನು 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರತಂಡ ನೋಡಿ ಆಡಿಷನ್‌ಗೆ ಕರೆಯಿತು. ನಂತರ ಸಿನಿಮಾಗೆ ಸೆಲೆಕ್ಟ್ ಆದೆ ಅಂತಾರೆ ನಾಯಕಿ ಸಂಜನಾ..ಒಟ್ಟಾರೆ ಸಿನಿಮಾದಲ್ಲಿ ನಟನೆ ಮಾಡಲು ಇರೋ ಕೆಲಸನು ಬಿಡೋದೆ ಒಂಥರಾ ಚೆಂದ…

 

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp