"ಪಡ್ಡೆ ಹುಲಿ" ಸಿನಿಮಾದ ಮೂರನೇ ಲಿರಿಕಲ್ ಸಾಂಗ್ ರಿಲೀಸ್ ..!! ಹೇಗಿದೆ ಸಾಂಗ್…!!

16-Feb-2019

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ಸಾಕಷ್ಟುಬರುತ್ತಿವೆ.. ಅದೇ ಸಾಲಿಗೆ ಪಡ್ಡೆ ಹುಲಿ ಸಿನಿಮಾ ಕೂಡ ಸೇರಿಕೊಳ್ಳುತ್ತದೆ.  ಕೆ. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಮೊದಲ ಬಾರಿಗೆ ನಟಿಸುತ್ತಿರುವ ಪಡ್ಡೆ ಹುಲಿ ಸಿನಿಮಾದ ಒಂದು ಮಾತಲ್ಲಿ ನೂರು ಹೇಳಲೇ' ಹಾಗೂ 'ಒಂದು ಮಾತಲ್ಲೇ ನೂರು ಹೇಳಲೇ' ಎರಡು ಹಾಡುಗಳು ಬಿಡುಗಡೆಯಾಗಿದ್ದು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದು, ಎರಡು ಹಾಡುಗಳು ಕೂಡ ವೈರಲ್ ಆಗುತ್ತಿದ್ದಾವೆ.

ಇದೀಗ ಪಡ್ಡೆ ಹುಲಿ ಸಿನಿಮಾದ ಮೂರನೇ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. B R ಲಕ್ಷ್ಮಣ ರಾವ್ ಅವರು ಬರೆದಿರುವ 'ಹೇಳಿ ಹೋಗು ಕಾರಣ'  ಎನ್ನುವ ಹಾಡು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಈ ಹಾಡಿನ ಬಗ್ಗೆ ನಿರ್ದೇಶಕ ಗುರುದೇಶ್ ಪಾಂಡೆಯವರು ಮಾತನಾಡಿದ್ದು, ಪ್ರತಿಯೊಂದು ಹಾಡಿನಲ್ಲಿ ಒಂದು ವಿಶೇಷತೆಯನ್ನ ನಿಮಗೆ ಅರ್ಪಿಸಬೇಕು ಅನ್ನೊ ಒಂದು ಪ್ರಯತ್ನ.. ಈ ಹಾಡಿನಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ B R ಲಕ್ಷ್ಮಣ ರಾವ್ ಅವರು ಬರೆದಿರುವ ಅಧ್ಬುತ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ, ಸಿರ್ದ್ದಾತ್ ಮಹಾದೇವನ್ ಮತ್ತು ಗುಬ್ಬಿ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ವಿಶೇಷ ಹಾಡು ಎಲ್ಲಾ ಪ್ರೇಮಿಗಳು ಹಾಗೂ ಎಲ್ಲಾ ಸಂಗೀತ ಪ್ರೇಮಿಗಳಿಗೂ ಅರ್ಪಿಸುತ್ತಿದ್ದೆವೆ ಎಂದು ತಿಳಿಸಿದ್ದಾರೆ. ಈ ಹಾಡು ನಿಜವಾಗಿಯೂ ಪ್ರೇಮಿಗಳಿಗೆ ಇಷ್ಟವಾಗುತ್ತದೆ ಎಂದರು.. ಹೇಳಿ ಹೋಗು ಕಾರಣ ಎನ್ನುವ ಪದ ಕೇಳುತ್ತಿದ್ದರೆ ಇದೊಂದು ಪ್ಯಾಥೋ ಸಾಂಗ್ ಅನಿಸುತ್ತದೆ.. ಹಾಗಾದ್ರೆ ಈ ಸಾಂಗ್ ಹೇಗಿದೆ ನೀವೊಮ್ಮೆ ಕೇಳಿ ಬಿಡಿ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp