ನೆಟ್ಟಿಗರ ಕೋಪಕ್ಕೆ ತುತ್ತಾದ ಸೂಪರ್ ಸ್ಟಾರ್  ರಜನಿಕಾಂತ್ ಮಗಳು..!!

18-Feb-2019

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಗೆ ಮಗಳ ಮದುವೆ ಸಂಭ್ರಮ. ಪುತ್ರಿ ಸೌಂದರ್ಯ ಅವರಿಗೆ ಇದು ಎರಡನೇ ಮದುವೆ  ಸಂಭ್ರಮ. ಕಳೆದ ಸೋಮವಾರ ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅಂದಹಾಗೇ ಈ ಹಿಂದೆ ತಾನು ಮದುವೆಯಾಗುತ್ತಿರುವ ವಿಚಾರದ ಬಗ್ಗೆ  ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗ ಪೋಸ್ಟ್ ಮಾಡುತ್ತಿದ್ದ ಪುತ್ರಿ ಸೌಂದರ್ಯ ಇದೀಗ ಟ್ವೀಟ್ ಮಾಡುವುದರ ಮೂಲಕ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ವಿವಾಹ ಸಮಾರಂಭಕ್ಕೆ ಸಿನಿ ಗಣ್ಯರು, ಅನೇಕ ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿತ್ತು. ರಜನೀ ಅವರ ಮಗಳಿಗೆ ಇದು ಎರಡನೇ ಮದುವೆಯಾಗಿದ್ದು  ಪುತ್ರಿ ಸೌಂದರ್ಯ ಅವರಿಗೆ ಈಗಾಗಲೇ ಮದುವೆಯಾಗಿ ಮಗು ಕೂಡ ಇದೆ. ಸೌಂದರ್ಯ ಈಗ ವರಿಸಿರುವ ಪತಿಯೊಟ್ಟಿಗೆ ಹನಿಮೂನ್ ಖುಷಿಯಲ್ಲಿದ್ದಾರೆ.

ಇವರಿಬ್ಬರು ಐಸ್ ಲ್ಯಾಂಡ್ ನಲ್ಲಿ ಹನಿಮೂನ್ ನಲ್ಲಿದ್ದು, ಈ ಸಂದರ್ಭದಲ್ಲಿ ತೆಗೆದ ಕೆಲವು ರೊಮ್ಯಾಂಟಿಕ್ ಫೋಟೋಗಳನ್ನು ಸೌಂದರ್ಯ ತಮ್ಮ ಟ್ವಿಟರ್ ಪೇಜ್ ನಲ್ಲಿ ಷೇರ್ ಮಾಡಿದ್ದಾರೆ.. ಆದರೆ ಸೌಂದರ್ಯ ಹನಿಮೂನ್ ಫೋಟೋ ನೋಡಿ ಟ್ವಿಟರಿಗರು ಗರಂ ಆಗಿದ್ದಾರೆ. ಕಾರಣವಿಷ್ಟೆ, ದೇಶವೇ ಯೋಧರ ಸಾವಿಗೆ ಕಂಬನಿ ಮಿಡಿಯುತ್ತಿರುವಾಗ ಅವರು ಹನಿಮೂನ್ ಫೋಟೋ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವು ಎಂಜಾಯ್ ಮಾಡಿ. ಹನಿಮೂನ್ ಮಾಡಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಹನಿಮೂನ್ ಫೋಟೋ ಹಾಕಲು ಎರಡು ದಿನ ತಡ್ಕೊಳ್ಳಿ. ದೇಶವೇ ದುಃಖದಲ್ಲಿರುವಾಗ ನಿಮ್ಮ ಹನಿಮೂನ್ ಫೋಟೋಗಳನ್ನು ಹಾಕುವುದು ಸರಿಯಲ್ಲ ಎನ್ನುವುದು ಟ್ವಿಟರಿಗರ ವಾದ. ಇದಕ್ಕೆ ಮುಂಚೆ ಪ್ರಿಯಾಂಕ ಚೋಪ್ರಾ ಕೂಡ ಫೋಟೋ ಹಾಕಿ ಟ್ರೋಲ್ ಆಗಿದ್ದರು. ಬಾಲಿವುಡ್ ನಲ್ಲೂ ಯೋಧರ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೊದಲು ನಾವು ಬೆಲೆ ಕೊಡಬೇಕಾಗಿರೋದು ನಮ್ಮ ಯೋಧರಿಗೆ ಎನ್ನುವುದನ್ನು ನಾವು ಮರೆಯಬಾರದು ಎಂಬುದು ನೆಟ್ಟಿಗರ ಮಾತಾಗಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp