ಸ್ಯಾಂಡಲ್ ವುಡ್’ನ ಕನಸಿನ ರಾಣಿ ಧನ್ಯವಾದ ತಿಳಿಸಿದ್ದು ಯಾರ್ಯಾರಿಗೆ ಗೊತ್ತಾ..?

19-Feb-2019

ಸ್ಯಾಂಡಲ್ವುಡ್ ಕನಸಿನ ರಾಣಿ ಮಾಲಾಶ್ರೀ ಸಿನಿಮಾ ಅಂದರೆ ಜನ ಈಗಲೂ ಕೂಡ  ಕುತೂಹಲದಿಂದಾನೇ ನೋಡುತ್ತಾರೆ…  ಒಂದು ಕಾಲದಲ್ಲಿ ಕನಸಿನ ರಾಣಿಯಾಗಿದ್ದ ಮಾಲಾಶ್ರೀ ಇದೀಗ ಆಕ್ಷನ್ ಸಿನಿಮಾಗಳ ಮೂಲಕ ಸೂಪರ್ ಲೇಡಿ ಆಗಿಬಿಟ್ಟಿದ್ದಾರೆ..ಗಂಗಾ, ಮಹಾಕಾಳಿ, ಶಕ್ತಿ, ದುರ್ಗಿ, ಕಿರಣ್ ಬೇಡಿ ಹೀಗೆ ಸಾಲು ಸಾಲು ಆಕ್ಷನ್ ಸಿನಿಮಾಗಳ ಮೂಲಕ 'ಲೇಡಿ ಸೂಪರ್ ಸ್ಟಾರ್' ಎನಿಸಿಕೊಂಡಿರುವ ಮಾಲಾಶ್ರೀ ಅವರಿಗೆ ಫೆಬ್ರವರಿ 17 ತುಂಬಾ ವಿಶೇಷವಾದ ದಿನವಂತೆ…!!

ಮಾಲಾಶ್ರೀ ಸಿನಿಮಾರಂಗಕ್ಕೆ ಬಂದು ಬರೋಬ್ಬರಿ 30 ವರ್ಷ ಕಳೆದುಹೋಗಿವೆ.. ಮಾಲಾಶ್ರೀ ಅವರ ಈ ಸಂತೋಷದ ಸಂದರ್ಭದಲ್ಲಿ ಜೊತೆಗಿದ್ದ, ಈ ಯಶಸ್ವಿ ಜರ್ನಿಯಲ್ಲಿ ಹೆಜ್ಜೆ ಹಾಕಿದ ವಿಶೇಷ ವ್ಯಕ್ತಿಗಳಿಗೆ 'ಕನಸಿನ ರಾಣಿ' ಧನ್ಯವಾದ ತಿಳಿಸಿದ್ದಾರೆ. ಮೂಲತಃ ತೆಲುಗಿನಲ್ಲಿ ಸಿನಿಮಾ ವೃತ್ತಿ ಆರಂಭಿಸಿದ ಮಾಲಾಶ್ರೀ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು ಮೂವತ್ತು ವರ್ಷ ಆಗಿದೆ. 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಪ್ರೇಕ್ಷಕರೆದುರು ಬಂದ 'ದೇವಿ' ಈಗ ಸ್ಯಾಂಡಲ್ ವುಡ್ ಕನಸಿನ ರಾಣಿ.  ಆ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಪಾರ್ವತಮ್ಮ ರಾಜ್ ಕುಮಾರ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. 'ನಂಜುಂಡಿ ಕಲ್ಯಾಣ' ಮಾಲಾಶ್ರೀಯವರಿಗೆ ಬ್ರೇಕ್ ಕೊಟ್ಟಂತಹ ಸಿನಿಮಾ . ಅಷ್ಟೆ ಅಲ್ಲದೆ  ಮಾಲಾಶ್ರೀಗೆ ಮೊದಲ ಕನ್ನಡ ಸಿನಿಮಾ ಕೂಡ ಹೌದು . ರಾಘವೇಂದ್ರ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಎರಡನೇ ಚಿತ್ರ. ಈ ಸಿನಿಮಾದಿಂದ ಅವರ ವೃತ್ತಿ ಜೀವನವೇ ಬದಲಾಗಿ ಹೋಯ್ತು… ಕನಸಿನ ರಾಣಿ ಆಕ್ಷನ್ ಕ್ವೀನ್ ಆಗಿರೋದೇ ಒಂಥರಾ ಸ್ಪೆಷಲ್ ಆಗಿದೆ... ಕೈಯಲ್ಲಿ ಬಾಟಲ್ ಹಿಡಿದುಕೊಂಡು ಒಳಗೆ ಸೇರಿದರೆ ಗುಂಡು ಎಂದ ಹುಡುಗಿ ಇವರೇನಾ ಅನಿಸದೇ ಇರದು...

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp