ತನ್ನನ್ನು ನೋಡಲು ಬಯಸಿದ ಅಭಿಮಾನಿಗೆ ಕಿಚ್ಚ ಮಾಡಿದ್ದೇನು ಗೊತ್ತಾ…?

20-Feb-2019

ತಮ್ಮ ತಮ್ಮ ನೆಚ್ಚಿನ ಸ್ಟಾರ್ ನಟ ನಟಿಯರನ್ನು ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ.. ಸ್ಟಾರ್ ನಟ ನಟಿಯರಿಗೆ ಅದೆಷ್ಟು ಜನ ಫ್ಯಾನ್ ಫಾಲೋಯಿಂಗ್ ಇರುತ್ತಾರೋ ಗೊತ್ತಿಲ್ಲ…ಅದರಲ್ಲೂ ಕಿಚ್ಚ ಸುದೀಪ್​​​ಗೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ಇನ್ನು ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಕಿಚ್ಚ ಎಂದಿಗೂ ನಿರಾಶೆ ಮಾಡಿದವರಲ್ಲ.ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುತ್ತಾರೆ… ಅದಕ್ಕಾಗಿಯೇ ಸುದೀಪ್ ಎಲ್ಲರಿಗೂ ಕೂಡ ಇಷ್ಟ ಆಗೋದು..

 

ಸುದೀಪ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಇಷ್ಟಾದರೂ ಅಭಿಮಾನಿಗಳಿಗೆ ಅವರನ್ನು ಒಮ್ಮೆ ಎದುರಿಗೆ ಕಣ್ತುಂಬ ನೋಡಿ ಅವರೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆಯಂತೂ ಇದ್ದೆ ಇರುತ್ತದೆ... ಕಿಚ್ಚ ಕೂಡಾ ಅಭಿಮಾನಿಗಳ ಜೊತೆ ಆತ್ಮೀಯವಾಗಿ ಮಾತನಾಡಿಸಿ ಫೋಟೋಗೆ ನಿಂತು ಪೋಸ್ ಕೊಡುತ್ತಾರೆ..ಸದ್ಯಕ್ಕೆ ಕಿಚ್ಚ ಮುಂಬೈನಲ್ಲಿ ಪೈಲ್ವಾನ್ ಚಿತ್ರದ ಚಿತ್ರಿಕರಣದಲ್ಲಿದ್ದಾರೆ.. ಸುದೀಪ್ ಅವರನ್ನು ನೋಡಲು ಬನಶಂಕರಿಯಿಂದ ಚೇತನ್ ಎಂಬ ಅಭಿಮಾನಿಯೊಬ್ಬ ಪುಟ್ಟೇನಹಳ್ಳಿಯ ಕಿಚ್ಚನ ನಿವಾಸಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ.

ಆದರೆ ಸುದೀಪ್ ಮನೆಯಲ್ಲಿ ಇಲ್ಲ ಎಂದು ತಿಳಿದು ನಿರಾಶರಾಗಿ ದುಃಖದಿಂದ ಮನೆ ಮುಂದೆ ನಿಂತು ಅಳಲು ಪ್ರಾರಂಭಿಸಿದ್ದಾರೆ. ಸ್ಥಳದಲ್ಲೇ ಇದ್ದ ಸುದೀಪ್ ಆಪ್ತ ನಿರ್ಮಾಪಕ ಜಾಕ್ ಮಂಜು ಎಷ್ಟೇ ಸಮಾಧಾನಪಡಿಸಿದರೂ ಆತ ಅಳು ನಿಲ್ಲಿಸಿಲ್ಲ.ಕೊನೆಗೆ ಮಂಜು ಕಿಚ್ಚನಿಗೆ ಫೋನ್ ಮಾಡಿದ್ದಾರೆ. ಅಭಿಮಾನಿಯೊಂದಿಗೆ ಫೋನ್ ಮೂಲಕ ಮಾತನಾಡಿದ ಕಿಚ್ಚ ಆತನನ್ನು ಸಮಾಧಾನಪಡಿಸಿ ಮುಂದಿನ ವಾರ ಮನೆಗೆ ಬಂದು ಭೇಟಿ ಆಗುವಂತೆ ತಿಳಿಸಿದ್ದಾರೆ. ಸ್ಟಾರ್ ನಟನಟಿಯರನ್ನು ಅಭಿಮಾನಿಗಳು ಎಷ್ಟು ಅಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp