ಸಾವು ಬಂದರೆ ಅದು ಭಾನುವಾರವೇ ಬರಲಿ ..!!  ಕನ್ನಡದ ಹಾಸ್ಯ ನಟ ಹೀಗಂದಿದ್ಯಾಕೆ…?

21-Feb-2019

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸರಿ ಸುಮಾರು 60 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಹಾಸ್ಯ ನಟ ಸದ್ಯ ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಮ್ಮ ಸಾವು  ಇದೇ ದಿನ ಬರಬೇಕೆಂದು ಹೇಳಿಕೊಂಡಿದ್ಯಾಕೆ ಈ ನಟ ಎದು ಅಚ್ಚರಿಯಾಗಬಹುದು ಅಲ್ವಾ… ಚಿತ್ರರಂಗಕ್ಕೆ ಬರುವ ಮುಂಚೆ ರಂಗಭೂಮಿಯಲ್ಲಿದ್ದವರು ಇವರು. ಅಂದ ಹಾಗೇ ಬರೋ ತಿಂಗಳು 75 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖುಷಿ ಪಡೋ ಬದಲು ಯಾಕೆ ಈ ಮಾತು ಹೇಳಿದ್ದಾರೆ…? ಜೀವನದಲ್ಲಿ ಸಾಕಷ್ಟು ಕಷ್ಟ-ಸುಖಗಳನ್ನು ಕಂಡ  ನಟ ಉಮೇಶ್ ಅವರು ಚಿತ್ರರಂಗಕ್ಕೆ ಉಮೇಶಣ್ಣ ಎಂದೇ ಚಿರಪರಿಚಿತ. ಮೂರು ತಲೆಮಾರಿನ ಜೊತೆ ನಟನೆ ಮಾಡಿರುವ ಖ್ಯಾತಿ ನಟ ಉಮೇಶ್ ಗೆ ಸಲ್ಲುತ್ತದೆ. ಅಂದಹಾಗೇ ತನಗೆ  ಸಾವು ಬಂದರೆ ಅದು ಭಾನುವಾರವೇ ಬರಲಿ ಎಂಬುದು ಹಾಸ್ಯ ಕಲಾವಿದನ ಆಸೆಯಂತೆ.

ಅದಕ್ಕೆ ಅವರು ಕೊಡುವ ಕಾರಣ ಅಂದು ರಜೆ ದಿನ. ಮೊದಲು ಯಾರು ತಮ್ಮ ಕೆಲಸಕ್ಕೆ ಚಕ್ಕರ್ ಹೊಡೆದು ತಮ್ಮನ್ನು ನೋಡಲು ಬರುವಂತಿಲ್ಲ. ನಂತರ ಸಾರ್ವಜನಿಕರಿಗೆ ಯಾವುದೇ ತೊಂದರೆ ಸಹ ಆಗುವುದಿಲ್ಲ. ಅಂತಿಮ ಯಾತ್ರೆಯಲ್ಲಿ ಟ್ರಾಫಿಕ್ ಜಾಮ್ ಸಹ ಭಾನುವಾರ ಆಗುವುದಿಲ್ಲ. ಹೀಗೆಂದ ತಕ್ಷಣ ಉಮೇಶಣ್ಣ ಅವರಿಗೆ ಸಾವಿನ ಮಾತು ಯಾಕೆ ಆಡ್ತೀರಾ ಅಂತ ಹೇಳಿದ್ದು ಆಯಿತು. ಆದರೆ, ಅವರು ಅದನ್ನು ಬಹಳ ಸೀರಿಯಸ್ ಆಗಿ ಹೇಳಿಕೊಂಡರು. ಉಮೇಶ್ ಅವರು ಜೀವನದಲ್ಲಿ ಪ್ರಾಕ್ಟಿಕಲ್ ಆಗಿದ್ದವರು, ಅದೇ ರೀತಿ ಬೆಳೆದವ್ರು ಕೂಡ. ಅಂದಹಾಗೇ ಇಳಿ ವಯಸ್ಸಿನಲ್ಲಿಯೂ ಸಿನಿಮಾ ಕೆಲ ಕಾರ್ಯಕ್ರಮಗಳಲ್ಲಿ  ಭಾಗವಹಿಸುತ್ತಾರೆ.  ‘ಕದ್ದು ಮುಚ್ಚಿ’ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಅವರು ಅಲ್ಲಿಗೆ ಬಂದಿದ್ದ ಹಂಸಲೇಖಾ ಜೊತೆ ಮಾತಿಗಿಳಿದ್ರು. ನಾನು  ಕೂಡ ಸರಿಗಮಪ ಗೆ ಬರಬೇಕೆಂದು ಕೊಂಡಿದ್ದೇನೆ, ಎಂದಾಗ ಹಂಸಲೇಖಾ ಅದಕ್ಕೇನು ಬನ್ನಿ ಎಂದ್ರಂತೆ. ಒಟ್ಟಾರೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವ ಉಮೇಶ್ ಅವರು ಸಾವಿನ ಬಗ್ಗೆಯೂ ಅಷ್ಟೇ ಯೋಚಿಸ್ತಾರೆ ಎಂಬುದು ಅವರ ಮಾತಿನಿಂದ ಸಾಬೀತಾಯ್ತು..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp