ಯಜಮಾನ ಚಿತ್ರದಲ್ಲಿ ನಟಿಸಿದೆ ದರ್ಶನ್ ಸಾಕಿರುವ ಈ ಹಸು..!!

22-Feb-2019

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ಸಿನಿಮಾ ಅದರಲ್ಲಿ ಏನಾದ್ರೂ ವಿಶೇಷತೆ ಇದ್ದೆ ಇರುತ್ತದೆ ಅಲ್ವ.. ದರ್ಶನ್ ಸಿನಿಮಾ ಅಂದರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.. ಅಭಿಮಾನಿಗಳು ಕೂಡ ಅಷ್ಟೆ ದರ್ಶನ್ ಹೇಳಿದ ಮಾತನ್ನು ಮೀರೋದೆ ಇಲ್ಲ… ಹೇಳಿ ಕೇಳಿ ದರ್ಶನ್ ಪ್ರಾಣಿ ಪ್ರಿಯರು… ಅವರು ಸಾಕಿರುವ ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗೆ ತುಂಬಾ ಅಭಿಮಾನವಿದೆ… ಸಾಕಿರುವ ಪ್ರಾಣಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಇದೀಗ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಸ್ಟಾರ್ ಕಲಾವಿದರಂತೆ ಗೋವುಗಳದ್ದು ಪ್ರಮುಖ ಪಾತ್ರವಿದೆ. ಯಜಮಾನ ಚಿತ್ರದಲ್ಲಿ ನಾಲ್ಕು ಗೂಳಿಗಳಿರುವ ಪೋಸ್ಟರ್ ಭಾರಿ ಎಲ್ಲರ ಗಮನವನ್ನು ಸೆಳೆದಿತ್ತು. ಇದೀಗ, ಮತ್ತೊಂದು ಸುದ್ದಿ ಕೇಳಿ ಬಂದಿದೆ. 

ಟ್ರೈಲರ್ ನಲ್ಲಿ ದರ್ಶನ್ ಜೊತೆ ಕಾಣಿಸುವ ಗೋವು ಸ್ವಂತ ದರ್ಶನ್ ಅವರದ್ದೆ ಅಂತೆ. ಇದನ್ನ ಖುದ್ದು ದರ್ಶನ್ ಅವರೇ ತಿಳಿಸಿದ್ದಾರೆ. ಹಸುವಿನ ಹೆಸರು ಭೀಮ ಅಂತ ಕೂಡ ದರ್ಶನ್ತಿಳಿಸಿದ್ದಾರೆ.ದರ್ಶನ್ ಮೊದಲೇ ಪ್ರಾಣಿಪ್ರಿಯರು. ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಬಹುತೇಕ ಎಲ್ಲಾ ರೀತಿಯ ಪ್ರಾಣಿಗಳನ್ನ ಸಾಕುತ್ತಿದ್ದಾರೆ. ಅವಶ್ಯಕತೆ ಇದ್ದಾಗ ತಮ್ಮ ಸಿನಿಮಾಗಳಲ್ಲಿ ಪ್ರಾಣಿಗಳಿಗೂ ಒಂದು ಪಾತ್ರ ಮಾಡಿಸ್ತಾರೆ. ಹಿಂದೆ ಸಾರಥಿ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಕುದುರೆಯನ್ನ ಬಳಸಿಕೊಂಡಿದ್ದರು. ಇದೀಗ, ಯಜಮಾನ ಸಿನಿಮಾದಲ್ಲಿ ತಮ್ಮದೇ ಗೋವು ಕೂಡ ನಟಿಸಿದೆ.ಇದರ ಜೊತೆಗೆ ತಮಿಳುನಾಡಿನ ಜಲ್ಲಿಕಟ್ಟಿನಲ್ಲಿ ಭಾಗವಹಿಸುವ ಕೆಲವು ಗೂಳಿಗಳನ್ನ ಕೂಡ ಬಳಸಲಾಗಿದೆಯಂತೆ. ಅದನ್ನ ಸಿನಿಮಾದಲ್ಲೇ ನೋಡಬೇಕಿದೆ. ಮಾರ್ಚ್ 1 ರಂದು ಯಜಮಾನ ತೆರೆಗೆ ಬರ್ತಿದ್ದು ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp