ಹೆಂಡ್ತಿ ಡ್ರಿಂಕ್ಸ್ ಮಾಡುತ್ತಿರುವ ವಿಡಿಯೋ ರಿವಿಲ್ ಮಾಡಿದ ಅಖಿಲ್..!!

23-Feb-2019

ಕಿರುತೆರೆಯ ಜನಮೆಚ್ಚಿದ ಧಾರವಾಹಿ ಅಗ್ನಿಸಾಕ್ಷಿಯ ನಟ ಅಖಿಲ್ ಪಾತ್ರಧಾರಿ ರಾಜೇಶ್ ಧೃವಾ ವಿರುದ್ಧ ಪತ್ನಿ ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಕೊಡಲಿಲ್ಲವೆಂದು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ, ಅಲ್ಲದೇ ಅವರಿಗೆ ಬೇರೆ ಹುಡುಗಿಯರ ಜೊತೆ ಅಫೇರ್ ಇದೆ ಎಂದು ಆರೋಪಿಸಿದ್ದಾರೆ. ಪತ್ನಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಿಂದ ರಾಜೇಶ್ ಧೃವಾ ಇದೀಗ ಪತ್ನಿಯ ಅಸಲೀ ಮುಖ ಅನಾವರಣ ಮಾಡಿದ್ದಾರೆ. ಪತ್ನಿ ಶೃತಿ ವಿರುದ್ಧ ಈಗಾಗಲೇ ನಾನೇ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದು ಆಕೆ ನನ್ನ ಹೆಸರು ಹಾಳು ಮಾಡಲು ಹೊರಟಿದ್ದಾಳೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಆಕೆ ಸರಿಯಿಲ್ಲ, ಆಕೆಗೆ ಬೇರೊಬ್ಬರ ಜೊತೆ ಅಫೇರ್ ಇದೆ, ಅದಕ್ಕೆ ಸಾಕ್ಷಿ –ಪುರಾವೆಗಳು ಕೂಡ ನನ್ನ ಬಳಿ ಇವೆ ಎಂದು ಆರೋಪಿಸಿದ್ದಾರೆ. 

ತಮ್ಮ ಪತ್ನಿ ಶೃತಿ ಮದ್ಯಪಾನ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.ರಾಜೇಶ್ ತಮ್ಮ ಪತ್ನಿ ಶೃತಿ ಮದ್ಯಪಾನದ ಮತ್ತಿನಲ್ಲಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶೃತಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದಾರೆ. ರಾಜೇಶ್ ಹಾಗೂ ಶೃತಿ ಲಿವಿಂಗ್ ಟು ಗೆದರ್ ಸಂಬಂಧದಲ್ಲಿದ್ದಾಗ ಈ ವಿಡಿಯೋವನ್ನು  ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ ಶೃತಿ ಮತ್ತು ರಾಜೇಶ್  ಸಂಭಾಷಣೆ  ರೆಕಾರ್ಡ್ ಆಗಿದೆ. ಸದ್ಯ ರಾಜೇಶ್ ಈಗ ಅದನ್ನು ಲೀಕ್ ಮಾಡಿದ್ದಾರೆ. ನನಗೆ ಅವಳ  ಜೊತೆ ಲಿವಿಂಗ್ ಟು ಗೆದರ್ ರಿಲೇಶನ್ಶಿಪ್ ಇತ್ತು. ಆ ನಂತರ ಮದುವೆಯಾಗಿದ್ದೂ ಆಯ್ತು. ಆದರೆ ಅವಳ ನಡತೆ ಸರಿಯಿರಲಿಲ್ಲ.. ಅಮ್ಮನ ಜೊತೆ ಅವಳ ಸಂಬಂಧ ಕೂಡ ಚೆನ್ನಾಗಿರಲಿಲ್ಲ. ಬೇರೊಬ್ಬರ ಜೊತೆ ಓಡಾಡುವುದು ಮೆಸೇಜ್ ಮಾಡುವುದು ಅದನ್ನೆಲ್ಲಾ ಸಾಕ್ಷಿ ನನ್ನ ಬಳಿ ಇವೆ ಎಂದು ರಿವೀಲ್ ಮಾಡಿದ್ದಾರೆ. 

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp