ಕಾರ್ಯಕ್ರಮಕ್ಕೆ ನ್ಯೂಸ್‍ಪೇಪರ್ ಧರಿಸಿ ಬಂದ ರಣವಿಕ್ರಮ ನಾಯಕಿ..

25-Feb-2019

ಸ್ಟಾರ್ ನಟ ನಟಿಯರು ಒಂದಲ್ಲಾ ಒಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ.. ಒಂದು ವೇಳೆ ಟ್ರೋಲಿಗರ ಕೈಗೆ ತಗುಲಿಹಾಕಿಕೊಂಡ್ರೆ ಮುಗಿದೆ ಹೋಯಿತು.. ಸಾಕಪ್ಪ ಸಾಕು ಅಂದು ಬಿಡುವಷ್ಟು ಟಾರ್ಚರ್ ಕೊಟ್ಟು ಬಿಡುತ್ತಾರೆ.. ಇದೀಗ ರಣವಿಕ್ರಮ ಚಿತ್ರದ ನಾಯಕಿ ಅದಾ ಶರ್ಮಾ ಕೂಡ ಸುದ್ದಿಯಲ್ಲಿದ್ದಾರೆ.. ಅದಾ ಶರ್ಮಾ ಅವರು ನ್ಯೂಸ್‍ಪೇಪರ್ ಉಡುಪು ಧರಿಸಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಮುಂಬೈನಲ್ಲಿ ನಡೆದ ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಅದಾ ಶರ್ಮಾ ನ್ಯೂಸ್ ಪೇಪರ್ ಪ್ರಿಂಟ್ ಇರುವ ಗೌನ್ ಧರಿಸಿ ಹೋಗಿದ್ದರು. ಈ ಗೌನ್ ಅನ್ನು ಫ್ಯಾಶನ್ ಸ್ಟೈಲಿಸ್ಟ್ ಆದ ಜೂಹಿ ಅಲಿ ಜೊತೆ ಸೇರಿ ಸ್ವತಃ ಅದಾ ಅವರೇ ವಿನ್ಯಾಸ ಮಾಡಿದ್ದರು. ಅದಾ ಕಾರ್ಯಕ್ರಮದಲ್ಲಿ ಧರಿಸಿದ್ದ ಈ ಉಡುಪನ್ನು ನೋಡಿ ಸಾಕಷ್ಟು ಜನ ಫಿದಾ ಆಗಿದ್ದಾರೆ. ಅದಾ ಶರ್ಮಾ ಅವರು ತಾವು ನ್ಯೂಸ್ ಪೇಪರ್ ಗೌನ್ ಧರಿಸಿದ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಅದಾ ಕನ್ನಡದಲ್ಲಿ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ಹಿಂದಿಯ ‘ಕಮಾಂಡೋ-3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಅದಾ ತಮಿಳಿನಲ್ಲಿ ನಟ ಪ್ರಭುದೇವ ಅವರ ‘ಚಾರ್ಲಿ ಚಾಪ್ಲಿನ್ 2’ ಚಿತ್ರದಲ್ಲೂ ಕೂಡ ಅಭಿನಯಿಸುತ್ತಿದ್ದಾರೆ. ಫ್ಯಾಷನ್ ಬಗ್ಗೆ ಅಪಾರ ಕಾಳಜಿವುಳ್ಳ ಅದಾಶರ್ಮಾ ತಮಗೆ ಇಷ್ಟವಾದ ಡಿಸೈನ್ ಅನ್ನು ಅವರೆ ವಿನ್ಯಾಸ ಮಾಡಿಕೊಳ್ಳುತ್ತಾರಂತೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp