ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ನಾಗಮಂಡಲ ನಾಯಕಿ ವಿಜಯಲಕ್ಷ್ಮಿ..!

26-Feb-2019

ಈ ಬಣ್ಣದ ಲೋಕವೇ ಹೀಗೆ ಯಾರಿಗೆ ಯಾವಾಗ ಅದೃಷ್ಟ ಕೈ ಬಿಡುತ್ತದೋ ಗೊತ್ತಿಲ್ಲ…  ಬಣ್ಣದ ಲೋಕದಲ್ಲಿ ಒಂದಷ್ಟು ವರ್ಷಗಳ ಕಾಲ ಮಿಂಚಿದ್ದ ಖ್ಯಾತ ನಟಿಯೊಬ್ಬರು ಇದೀಗ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಆಕೆ ಮತ್ಯಾರು ಅಲ್ಲ ನಾಗಮಂಡಲ ಸಿನಿಮಾ ಖ್ಯಾತಿಯ ವಿಜಯಲಕ್ಷ್ಮಿ..  ಇದೀಗ ವಿಜಯಲಕ್ಷ್ಮಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಹಣದ ಸಮಸ್ಯೆ ಎದುರಾಗಿದ್ದ ಈಕೆಗೆ ಸ್ಯಾಂಡಲ್ ವುಡ್ ಸಹಾಯಹಸ್ತ ನೀಡಿತ್ತು.. ಅವಕಾಶಗಳೇ ಸಿಗದೆ ವಂಚಿತಗಳಾಗಿದ್ದ ಇದೀಗ ಅವಕಾಶ ಅರಸಿಕೊಂಡು ಬಂದಿದೆ.. ಆರೋಗ್ಯ ಸುಧಾರಿಸಿದ ತಕ್ಷಣವೇ ಮಹೇಶ್ ನಿರ್ದೇಶನದ ‘ಮದಗಜ’ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ವಿಜಯಲಕ್ಷ್ಮಿ ಬಣ್ಣ ಹಚ್ಚುವುದು ಬಹುತೇಕ ಖಾತರಿಯಾಗಿದೆ. ಸದ್ಯಕ್ಕೆ ಈ ಬಗ್ಗೆ ನಟಿ ವಿಜಯಲಕ್ಷ್ಮಿ ಅವರ ಬಳಿ ಯಾವುದೇ ಮಾತುಕಥೆ ಆಗಿಲ್ಲ.  

ಅವಕಾಶ ವಂಚಿತರಾಗಿರುವ ವಾಣಿಜ್ಯ ಮಂಡಳಿಯ ಹಲವು ಪದಾಧಿಕಾರಿಗಳು ಮಾಡಿಕೊಂಡ ಮನವಿಗೆ ನಿರ್ದೇಶಕ ಮಹೇಶ್ ಗ್ರೀನ್ ಸಿಗ್ನಲ್  ತೋರಿಸಿದ್ದಾರೆ. ಚಿತ್ರದಲ್ಲಿನ ಪ್ರಮುಖ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನೂ ಕೆಲವು ದಿನಗಳು ಬೇಕಾಗಿದೆ. ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದೆ... ಈ ಹಂತದಲ್ಲೇ ವಿಜಯಲಕ್ಷ್ಮಿ ಅವರಿಗೊಂದು ಅವಕಾಶ ನೀಡಿ ಎಂಬುದಾಗಿ ಚಿತ್ರೋದ್ಯಮದ ಕೆಲವು ಗಣ್ಯರು ನನ್ನಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ .

ನಿರ್ದೇಶಕ ಮಹೇಶ್ ಚಿತ್ರದಲ್ಲಿ ಅವರಿಗೊಂದು ವಿಶೇಷ ಪಾತ್ರವನ್ನೇ ನೀಡುತ್ತೇನೆ. ಈ ಮೂಲಕವಾದರೂ ಅವರಿಗೆ ನನ್ನಿಂದ ನೆರವಾದರೆ ಸಾಕು ಎಂದಿದ್ದಾರೆ.. ವಿಜಯಲಕ್ಷ್ಮಿ ಅವರನ್ನು ಚಿತ್ರದ ಪಾತ್ರವೊಂದಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದೆಂದು ನಿರ್ದೇಶಕ ಮಹೇಶ್ ಭರವಸೆ ನೀಡಿದ ಹಿನ್ನಲೆಯಲ್ಲಿಯೇ  ಫೇಸ್‌ಬುಕ್‌ನಲ್ಲಿ ನಿವಾಸ ಕಾಣದ ಬದುಕಿನ ಗೋಳಿನ ಕತೆ ಹೇಳಿಕೊಂಡ ಕುಣಿಗಲ್ ತಾಲೂಕಿನ ಸಣ್ಣಘಟ್ಟ ಗ್ರಾಮದ ಹಿರಿಯ ಅಜ್ಜಿ ದ್ಯಾವಮ್ಮ ಅವರನ್ನು ಚಿತ್ರದ ಮತ್ತೊಂದು ಪೋಷಕ ಪಾತ್ರದಲ್ಲಿ ತೋರಿಸಲು ನಿರ್ದೇಶಕ ಮಹೇಶ್ ಮುಂದಾಗಿದ್ದಾರೆ. ವಿಷಯ ತಿಳಿದ ಮರು ದಿನವೇ ಸಣ್ಣಘಟ್ಟ ಗ್ರಾಮಕ್ಕೆ ಹೋಗಿ ಅಜ್ಜಿಯನ್ನು ಭೇಟಿ ಮಾಡಿ, ಚಿತ್ರದ ಮೂಲಕ ಆರ್ಥಿಕ ನೆರವು ನೀಡಲು ಭರವಸೆ ನೀಡಿದ್ದಾರೆ. ಒಟ್ಟಾರೆ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಅನ್ನು ಆಳಿದ ನಟ ನಟಿಯರು ಇದೀಗ ಅವಕಾಶ ಸಿಗದೆ ತಮ್ಮ ತಮ್ಮ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp