'ಯುವರತ್ನ' ಚಿತ್ರಕ್ಕಾಗಿ ಬಂದ್ಳು ಬಾಲಿವುಡ್ ಬೆಡಗಿ..!

26-Feb-2019

ಸ್ಯಾಂಡಲ್ ವುಡ್ ನ ಬಹು ನಿರೀಕ್ಷೀತ ಸಿನಿಮಾವಾದ ಯುವರತ್ನ ಸಿನಿಮಾ ತಂಡ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.. ಸಂತೋಷ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಯುವರತ್ನ' ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿದ್ದು, ಬಾಲಿವುಡ್ ಬೆಡಗಿ ಸಾಯೇಷಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದರ ಬಗ್ಗೆ ನಟಿ ಸಾಯೇಷಾ ಕೂಡ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.. ಒಂದು ಅದ್ಭುತವಾದ ಚಿತ್ರ ತಂಡಕ್ಕೆ ಸೇರಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ..

ಪುನೀತ್ ಅವರೊಂದಿಗೆ ನಟಿಸಲು ಕಾಯುತ್ತಿದ್ದೇನೆ. ಥ್ಯಾಂಕ್ಸ್ ಸಂತೋಷ್ ಸರ್ ಮತ್ತು ಹೊಂಬಾಳೆ ಚಿತ್ರ ತಂಡ. ಇದು ನನ್ನ ಮೊದಲ ಕನ್ನಡ ಚಿತ್ರವೆಂದು ತಮ್ಮ ಟ್ಟೀಟರ್ ನಲ್ಲಿ ಬರೆದುಕೊಂಡಿದ್ದಾರೆ..ಬಾಲಿವುಡ್ ಖ್ಯಾತ ನಟ ಸುಮೀತ್ ಸೈಗಲ್ ಹಾಗೂ ಶಾಹೀನ್ ಬಾನು ಪುತ್ರಿ ಸಾಯೇಷಾ, ಮೊದಲು ಅಭಿನಯಿಸಿದ ಸಿನಿಮಾ ತೆಲಗಿನ 'ಅಕಿಲಾ'. ತದ ನಂತರ ಬಾಲಿವುಡ್‌ನಲ್ಲಿ ಅಜಯ್‌ ದೇವಗನ್‌ಗೆ ಜೋಡಿಯಾಗಿ ಶಿವಾಯ್‌ನಲ್ಲಿಯೂ ಅಭಿನಯಿಸಿದ್ದಾರೆ. ಇನ್ನು 'ಗಜಿನಿಕಾಂತ್' ಸಿನಿಮಾದಲ್ಲಿ ಆರ್ಯಗೆ ಜೋಡಿ ಆಗಿ ಸಾಯೇಷಾ ಬಣ್ಣ ಹಚ್ಚಿದ್ದರು.  

ಆರ್ಯ ಮತ್ತು ಆಯೇಷಾ ಜೋಡಿಯ ಬಗ್ಗೆ ಆಫ್‌ಸ್ಕ್ರೀನ್‌ನಲ್ಲಿಯೂ ಸಿಕ್ಕಾಪಟ್ಟೆ  ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಈ ರೂಮರ್ಸ್ ಬಗ್ಗೆ ಖುದ್ದು ಆರ್ಯ ಅವರೇ ಸಾಯೀಷಾ ಅವರನ್ನು ಮದುವೆಯಾಗುತ್ತಿರುವುದಾಗಿ ಪ್ರೇಮಿಗಳ ದಿನದಂದು ಖಚಿತಪಡಿಸಿದ್ದಾರೆ. ಮುಂದಿನ ತಿಂಗಳು ಈ ಜೋಡಿ ಸಪ್ತಪದಿ ತುಳಿಯಲಿದ್ದಾರೆ.. ಕನ್ನಡಕ್ಕಾಗಿ ಬಾಲಿವುಡ್ ಬೆಡಗಿ ಬಂದಿರೋದು ಖುಷಿಯ ವಿಚಾರವೇ ಸರಿ… ಆದರೆ ಈಕೆ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕಿಯಾಗುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp