ಥಿಯೇಟರ್​​ ಮುಂದೆ ತನ್ನದೇ ಕಟೌಟ್​ ನೋಡಿ ಕಣ್ಣೀರಿಟ್ಟ ಡೈರೆಕ್ಟರ್ ಕಮ್ ಹೀರೋ..!

27-Feb-2019

ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಬಜೆಟ್ ನಲ್ಲಿ ಸಿನಿಮಾಗಳನ್ನ ಮಾಡಬಹುದು ಎಂದು ತೋರಿಸಿಕೊಟ್ಟವರು ಹಾಗೂ ಅದರಿಂದಲೂ ಹಣಮಾಡಬಹುದು ಎಂದು ತೋರಿಸಿಕೊಟ್ಟವರು ಯಂಗ್ ಡೈರೆಕ್ಟರ್ ರಿಷಬ್ ಶೆಟ್ಟಿ.. ಇದೀಗ ರಿಷಬ್ ಯಶಸ್ವಿ ನಿರ್ದೇಶಕರ ಸಾಲಿನಲ್ಲಿ ನಿಂತಿದ್ದಾರೆ..ಅಷ್ಟೆ ಅಲ್ಲದೆ ಯಶಸ್ವಿ ನಿರ್ದೇಶಕ ರಿಷಭ್ ಶೆಟ್ಟಿ ಅವರಲ್ಲಿ ಒಳ್ಳೆಯ ನಟ ಇದ್ದಾನೆ ಅನ್ನೋದು  ಇದೀಗ ಸಾಭೀತಾಗಿದೆ.. ಬೆಲ್​ ಬಾಟಂ ಚಿತ್ರದ ಮೂಲಕ ನಾಯಕನಟನಾಗಿ ಸ್ಯಾಂಡಲ್ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ..  ರಿಷಬ್  ಗಾಂಧಿ ನಗರಕ್ಕೆ ಬಂದಿದ್ದೆ ಹೀರೋ ಆಗಬೇಕಂತ ಅಂತೆ.. ಆದರೆ, ಇಲ್ಲಿ ನೆಲೆಯೂರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಕೊಂಡು ಊರಿಗೆ ವಾಪಸ್ಸಾದರಂತೆ…

ಬೇರೆ ನಟರ ರೀತಿ ರಿಷಬ್ ಕೂಡ ದೊಡ್ಡ ದೊಡ್ಡ ನಟರ ಕಟೌಟ್​ಗಳನ್ನು ನೋಡಿ ನಾನೂ ಇವರಂತೆ ಆಗಬೇಕು ಎಂದು ಯಾವಾಗಲೂ ಕನಸು ಕಾಣುತ್ತಿದ್ದರಂತೆ..  ತುಘ್ಲಕ್​ ಚಿತ್ರದಲ್ಲಿ ಫಸ್ಟ್ ಟೈಮ್ ಬಣ್ಣ ಹಚ್ಚಿದ್ರೂ ಕೂಡ ಯಾಕೋ ಲಕ್ ವರ್ಕೌಟ್ ಆಗಲಿಲ್ಲ…  ಹಾಗಾಗಿ ಚಿತ್ರರಂಗದ ಸಹವಾಸವೇ ಬೇಡ ಅಂತ ಸುಮ್ಮನೆ ಆಗಿ ಬಿಟ್ಟರಂತೆ…

ಸಿನಿಮಾ ಗೀಳು ಬಿಡದ ರಿಷಬ್ ಡೈರೆಕ್ಟರ್​ ಆಗಿ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟರು… ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಂತಹ ಎರಡು ಬ್ಲಾಕ್ ಬಸ್ಟರ್ ಮೂವಿಯನ್ನು ಡೈರೆಕ್ಟ್ ಮಾಡುತ್ತಾರೆ. ಈ ಎರಡು ಹಿಟ್​ ಚಿತ್ರಗಳ ಬಳಿಕ ಬೆಲ್ ಬಾಟಂ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಸತತ 14 ವರ್ಷಗಳ ನಂತರ ರಿಷಭ್ ಕನಸು ನನಸಾಗಿದೆ. ಹೀರೋ ಆಗಿ ಗೆಲುವಿನ ನಗೆ ಬೀರಿದ್ದಾರೆ.. ಅವರದೇ ಕಟೌಟ್​ ಚಿತ್ರಮಂದಿರಗಳ ಮುಂದೆ ರಾರಾಜಿಸುತ್ತಿವೆ. ಇದನ್ನು ನೋಡಿರುವ ರಿಷಭ್ ಶೆಟ್ಟಿ ಕಣ್ಣು ತುಂಬಿ ಬಂದಿವೆ. ತಮ್ಮ ಮನದ ಸಂತಸವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಅವರು,  ತೊಂಬತ್ತರ ದಶಕದಲ್ಲಿ ಥಿಯೇಟರ್​ಗಳ ಮುಂದೆ ಹಾಕುತ್ತಿದ್ದ ಹೀರೋಗಳ ಕಟೌಟುಗಳನ್ನು ಕತ್ತೆತ್ತಿ ನೋಡುತ್ತಾ ಕಾಣುತ್ತಿದ್ದ ಕನಸುಗಳು, ನಾನು ಹೀರೋ ಆಗಬೇಕೆಂಬ ಆಸೆ ಹೊತ್ತು ಇಲ್ಲಿಗೆ ಬರುವಂತೆ ಮಾಡಿತು.  ನಿಮ್ಮೆಲ್ಲರ ಪ್ರೋತ್ಸಾಹ ಆರೈಕೆ ನಮ್ಮೆಲ್ಲರ ಮೇಲೆ ಹೀಗೆ ಇರಲಿ ಎಂದು ಹೇಳಿದ್ದಾರೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp