ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ ರಾಜ್ ಕುಟುಂಬದ ಈ ಕುಡಿ…!

27-Feb-2019

ಬಣ್ಣ ಹಚ್ಚಬೇಕು, ಒಳ್ಳೆಯ ಕಲಾವಿದರಾಗಬೇಕು ಎಂಬುದು ಕೆಲವೊಬ್ಬರ ಕನಸಾಗಿರುತ್ತದೆ.. ಆದರೆ ಬಣ್ಣ ಹಚ್ಚುವ ಪ್ರತಿಯೊಬ್ಬರು ಕೂಡ  ಹೀರೋ ಆಗಬೇಕು ಅಂತಾನೇ ಬಯಸುತ್ತಾರೆ… ಆದರೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ… ಅದಕ್ಕೆ ಸಾಕಷ್ಟು ಹರಸಾಹಸನೇ ಪಡಬೇಕಾಗುತ್ತದೆ. ಶ್ರಮದ ಜೊತೆಗೆ ಅದೃಷ್ಟನೂ ಕೂಡ ಇರಬೇಕು.. ಕೆಲವೊಮ್ಮೆ ಬಿಗ್ ಸ್ಕ್ರೀನ್ ನಲ್ಲಿ ಅವಕಾಶ ಸಿಗದೇ ಇದ್ದಾಗ ಸಾಮಾನ್ಯವಾಗಿ ಕಲಾವಿದರ ಮನಸು ವಾಲುವುದು ಧಾರವಾಹಿಗಳ ಕಡೆಗೆ…ಆದರೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡ ಎಷ್ಟೋ ನಟ ನಟಿಯರು ಕೂಡ ಕಿರುತೆರೆಗೂ ಬಂದಿದ್ದಾರೆ. ಸ್ಟಾರ್ ನಟ ನಟಿಯರು ನಿರೂಪಕರಾಗಿ ಕಿರುತೆರೆಯನ್ನು ಆಳಿದ್ದಾರೆ.. ಇದೀಗ ರಾಜ್ ಕುಟುಂಬದ ಮತ್ತೊಂದು ಕುಡಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಅಣ್ಣಾವ್ರ ಕುಟುಂಬದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಈಗಾಗಲೇ ಕಿರುತೆರೆಯಲ್ಲಿ ನಿರೂಪಕರಾಗಿ, ಧಾರವಾಹಿ ನಿರ್ಮಾಣ ಮಾಡುವ ಮೂಲಕ ತಮ್ಮ ತಮ್ಮ ಛಾಪನ್ನು ಮೂಡಿಸಿದ್ದರು. ಆದರೆ ಯಾರೂ ಬಣ್ಣ ಹಚ್ಚಿರಲಿಲ್ಲ. ಆದರೆ ಈಗ ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಮರಳಿ ಬಂದಳು ಸೀತೆ' ಎನ್ನುವ ಧಾರವಾಹಿಯೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣದಲ್ಲಿ ಈ ಧಾರವಾಹಿ ಮೂಡಿಬರುತ್ತಿದ್ದು, ಇಂದಿನಿಂದ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಬಹಳ ವರ್ಷಗಳ ನಂತರ ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣಕ್ಕಿಳಿದಿದ್ದು, ಸ್ವತಃ ರಾಘವೇಂದ್ರ ರಾಜ್ ಕುಮಾರ್ ಈ ಧಾರವಾಹಿಯನ್ನು ನಿರ್ಮಿಸುತ್ತಿದ್ದಾರೆ.ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ತೇಜಸ್, ಮಧುಬಾಲಾ, ರಕ್ಷಿತಾ, ಅಪೇಕ್ಷಾ, ಅಶ್ವಿನಿ ಗೌಡ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ವಿನಯ್ ರಾಜ್ ಕುಮಾರ್ ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವುದು ಅಮ್ಮನಿಗಾಗಿ ಅಂತೆ. ತಮ್ಮ ಅಮ್ಮನಿಗೆ ಧಾರವಾಹಿಯಲ್ಲಿ ನಾನು ಅಭಿನಯಿಸಬೇಕು ಎಂದು ಆಸೆಯಿತ್ತು. ಅದನ್ನು ಈ ಮೂಲಕ ನೆರವೇರಿಸುತ್ತಿದ್ದೇನೆ ಎಂದು ವಿನಯ್ ರಾಜ್ ಕುಮಾರ್ ಹೇಳಿಕೊಂಡಿದ್ದಾರೆ.. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದು ಖುಷಿಯ ವಿಚಾರವೇ ಸರಿ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp