ಅಮೇರಿಕಾದಲ್ಲಿ ‘ಕ್ಯಾಪ್ಟನ್‌’ನೊಂದಿಗೆ ಬರುತ್ತಿದ್ದಾನೆ ನಮ್ಮ ಸ್ಯಾಂಡಲ್ ವುಡ್ನನ ‘ಯಜಮಾನ’..!!

28-Feb-2019

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಬಹುನಿರೀಕ್ಷಿತ ಸಿನಿಮಾದ ಯಜಮಾನ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ… ವರ್ಷಗಳಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿತ್ತು..ಯಾಕಂದ್ರೆ ದರ್ಶನ್ ಅವರ ಯಾವುದೇ ಸಿನಿಮಾವು ಕೂಡ ರಿಲೀಸ್  ಆಗಿರಲಿಲ್ಲ. ಇದರಿಂದ ಅಭಿಮಾನಿಗಳಿಗೆ ಬೇಸರವಾಗಿತ್ತು… ಆದರೆ ಇದೀಗ ಯಜಮಾನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.. ನಾಳೆ ವಿಶ್ವಾದಾದ್ಯಂತ ಯಜಮಾನ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ...

ಯಜಮಾನ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಯೂಟ್ಯೂಬ್ ವೀಕ್ಷಣೆಯಲ್ಲಿ ಈಗಾಗಲೇ ಹೊಸ ದಾಖಲೆಗಳನ್ನು ಬರೆದಿವೆ. ಸ್ಯಾಂಡಲ್’ವುಡ್ ನಲ್ಲಿ ಹಲವು ನವ ವಿಷಯಗಳಿಗೆ ಸಾಕ್ಷಿಯಾಗಲಿರುವ ಯಜಮಾನ ಇದೇ ಮೊದಲ ಬಾರಿಗೆ ಆಂಧ್ರದ ಅನಂತಪುರದಲ್ಲಿ ಮೊದಲ ದಿನವೇ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಮುಂಚೆ ಕನ್ನಡ ಚಿತ್ರಗಳು ಆಂಧ್ರದಲ್ಲಿ ಮುಖ್ಯವಾಗಿ ಹೈದರಾಬಾದಿನಲ್ಲಿ ಮಾತ್ರ ಬಿಡುಗಡೆಗೊಳ್ಳುತ್ತಿದ್ದವು.

ಅಮೇರಿಕಾದಲ್ಲಿ ಮಾತ್ರ ಯಜಮಾನ ಸಿನಿಮಾ ಒಂದು ವಾರ ತಡವಾಗಿ ಮಾರ್ಚ್ 8 ರಂದು ಸಿನಿಮಾ ತೆರೆಕಾಣಲಿದೆ. ಅಮೇರಿಕಾ ಹಾಗೂ ಕೆನಡಾದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ. ಅಮೇರಿಕಾದ ಶಿಕಾಗೋ, ಡಲ್ಲಾಸ್,ಲಾಸ್ ಎಂಜಲೀಸ್,ಸೀಟಲ್ ಮುಂತಾದ ನಗರಗಳಲ್ಲಿ ಯಜಮಾನ ತೆರೆಕಾಣಲಿದ್ದಾನೆ. ಕ್ಯಾಪ್ಟನ್ ಮಾರ್ವೆಲ್ ಚಿತ್ರದ ಜೊತೆ ಯಜಮಾನ ಸಿನಿಮಾ ತೆರೆಗೆ ಬರಲಿದೆ.. ಅಂತರಾಷ್ಟ್ರೀಯ ಮಟ್ಟದಲ್ಲಿ ಯಜಮಾನ ಚಿತ್ರದ ಗಳಿಕೆಯಲ್ಲಿ ಈ ಸಿನಿಮಾ ಸಾಕಷ್ಟು ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp