ಆನ್’ಲೈನ್’ನಲ್ಲಿ 'ಯಜಮಾನ'..!! ಸಂಕಷ್ಟದಲ್ಲಿ ಡಿ-ಬಾಸ್..!!!

02-Mar-2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ  ಯಜಮಾನ  ಸದ್ಯ  ರಾಜ್ಯಾದ್ಯಂತ  ರಿಲೀಸ್ ಆಗಿದ್ದು, ಅಭಿಮಾನಿಗಳಿಂದ  ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಯಜಮಾನನ ಕಟೌಟ್ ನೋಡಿ ಫ್ಯಾನ್ಸ್ ದಂಗಾಗಿ ಹೋಗಿದ್ದಾರೆ. ನಿನ್ನೆಯಷ್ಟೇ ಭರ್ಜರಿಯಾಗಿ ಬಿಡುಗಡೆಯಾದ ಯಜಮಾನನಿಗೆ ಸಂಕಷ್ಟ ಒದಗಿದೆ. ಎಷ್ಟೇ ಸ್ಟಾರ್ ಗಳು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರೂ ಪೈರಸಿ ಮಾತ್ರ ನಿಲ್ಲಿಸಲಾಗ್ತಾ ಇಲ್ಲ. ಸ್ಟಾರ್ಗಳು ಎರಡು ಮೂರು ವರ್ಷ ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಕೇವಲ ಒಂದೇ ಸಿನಿಮಾಕ್ಕೆ ಕಮೀಟ್ ಆಗಿ, ಹಗಲು ರಾತ್ರಿ ಸಾವಿರಾರು ಮಂದಿ ಸಿನಿಮಾ ಒಂದಕ್ಕೆ ಬೆವರರಿಸಿರುತ್ತಾರೆ. ಆದರೆ ರಿಲೀಸ್ ಆದ ದಿನವೇ ಅದು ಆನ್ಲೈನ್ ನಲ್ಲಿ ಸೋರಿಕೆಯಾದರೇ ಅವರ ಶ್ರಮ ಹೊಳೆಲೀ ಹುಣಸೇ ಹಣ್ಣು ತೇದಂತಾಗುತ್ತದೆ.

ಈಗ ಯಜಮಾನನಿಗೂ ಅದೇ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ ಎಷ್ಟೇ ಮನವಿ ಮಾಡಿಕೊಂಡರೂ ಕಿಡಿಗೇಡಿಗಳು ಪೈರಸಿ ಮಾಡೋದನ್ನು ಬಿಟ್ಟಿಲ್ಲ. ಸಿನಿಮಾ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಭಾರೀ ಪ್ರದರ್ಶನ ಕಾಣುತ್ತಿದ್ದರೂ, ಇತ್ತ ಆನ್ ಲೈನ್ ನಲ್ಲಿ ಸಿನಿಮಾ ಸೋರಿಕೆಯಾಗಿದೆ. ಈ ನಡುವೆ ಇತ್ತೀಚೆಗೆ ಎಲ್ಲಾ ಸಿನಿಮಾಗಳ ಹಾಗೆ ದರ್ಶನ್ ಯಜಮಾನ ಸಿನಿಮಾವೂ ಆನ್ ಲೈನ್ ಕಳ್ಳರ ಹಾವಳಿಗೆ ಸಿಲುಕಿದೆ. ಯಜಮಾನ ಥಿಯೇಟರ್ ನಲ್ಲಿ ಪ್ರಸಾರವಾಗುತ್ತಿದ್ದಂತೆ ವೀಕ್ಷಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಲೈವ್ ಆಗಿ ವಿಡಿಯೋ ಸೋರಿಕೆ ಮಾಡಿದ್ದಾರೆ.

ಇದನ್ನು ಗುರುತಿಸಿದ ದರ್ಶನ್ ಅಭಿಮಾನಿಗಳು ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ಲಿಂಕ್ ಡಿಲೀಟ್ ಮಾಡಲಾಗಿದೆ. ಹಿಂದೆ ಕೆಜಿಎಫ್ ಸಿನಿಮಾ ಹಾಗೂ ಸೀತರಾಮ ಕಲ್ಯಾಣ ಸಿನಿಂಆಗೂ ಕೂಡ ಇದೇ ಸಂಕಷ್ಟ ಬಂದಿತ್ತು.. ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಿದ್ರೆ ಇತ್ತ ಪೈರಸಿ ಕಳ್ಳರು ಸಿನಿಮಾಹೆ ಹೆಚ್ಚಿನ ಒಡೆತವನ್ನೆ ನೀಡಿದ್ದಾರೆ… ಎಲ್ಲಾ ಸ್ಟಾರ್ ಗಳು ಪೈರಸಿ  ಮಾಡುವುದು ಬೇಡ ಎಂದು ವಿನಂತಿಸಿಕೊಂಡರು ಈ ಪೈರಸಿ ಮಾತ್ರ ನಿಲ್ಲುತ್ತಿಲ್ಲ. ಈಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp