ಅಂತೂ ಇಂತೂ ಅಪ್ಪು ಪ್ರೊಡಕ್ಷನ್’ನ ಮೊದಲ ಸಿನಿಮಾ ರೆಡಿ ಆಯ್ತು..!!

02-Mar-2019

ಪುನೀತ್ ರಾಜ್’ಕುಮಾರ್ ಸ್ಯಾಂಡಲ್’ವುಡ್ ನಲ್ಲಿ ಯಶಸ್ವಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದಾರೆ.. ಅಭಿಮಾನಿಗಳು ಅಪ್ಪು ಎಂದರೆ ಸಾಕು ಹುಚ್ಚೆಂದು ಕುಣಿಯುತ್ತಾರೆ..ಪಕ್ಕಾ ಫ್ಯಾಮಿಲಿ ಜೊತೆ ಕೂತು ನೋಡುವಂತಹ ಸಿನಿಮಾಗಳನ್ನೆ ಅಪ್ಪು ಮಾಡುವುದು ಎನ್ನುವುದು ಅಭಿಮಾನಗಳ ಮಾತು… ಕೇವಲ ಸಿನಿಮಾಗಳಲ್ಲಿ ಅಷ್ಟೆ ಅಲ್ಲದೆ ಕಿರುತೆರೆಯಲ್ಲೂ ಅಪ್ಪು ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆಯಲ್ಲೂ ಕೂಡ ಅಪ್ಪು ಸೈ ಎನಿಸಿಕೊಂಡರು… ವಿಭಿನ್ನ ರೀತಿಯ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ.. ಅಭಿನಯಕ್ಕೂ ಸೈ.. ಗಾಯಕನಾಗಿಯೂ ಸೈ.. ಸಾಕಷ್ಟು ಹಾಡುಗಳಿಗೆ ಧನಿಗೂಡಿಸಿದ್ದಾರೆ ಪವರ್ ಸ್ಟಾರ್ ರಾಜ್ ಕುಮಾರ್…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಡಿ ತಯಾರಾದ ಮೊದಲ ಸಿನಿಮಾ 'ಕವಲುದಾರಿ' ಅಂತೂ ಇಂತೂ ಕೊನೆಗೂ ಸಿದ್ದವಾಗಿದೆ.. .ಕವಲುದಾರಿ ಸಿನಿಮಾ ಈಗಾಗಲೇ ಆಡಿಯೋ ಲಾಂಚ್ ಗೆ ಸಿದ್ಧವಾಗಿದ್ದು, ಇದೇ ಮಾರ್ಚ್ 5 ರಂದು ಅಂದರೆ ಮಂಗಳವಾರ ಪಿಆರ್ ಕೆ ಪ್ರೊಡಕ್ಷನ್ ನ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ ಎಂದು ಸ್ವತಃ ಪುನೀತ್ ರಾಜ್ ಕುಮಾರ್ ಎಲ್ಲರಿಗೂ ತಿಳಿಸಿದ್ದಾರೆ.

ಕವಲು ದಾರಿ ಸಿನಿಮಾ ಈಗಾಗಲೇ ಸೆನ್ಸಾರ್ ನಲ್ಲಿ ಪಾಸ್ ಆಗಿದ್ದು, ಈ ಸಿನಿಮಾದಲ್ಲಿ ರಿಷಿ, ಅನಂತ್ ನಾಗ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ವಿಶಿಷ್ಟ ಕಥಾಹಂದರ ಹೊಂದಿರುವ ಕವಲುದಾರಿ ಸದ್ಯದಲ್ಲೇ ತೆರೆಗೆ ಬರಲಿದೆ. ಅವರದೇ ಆದ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಕವಲು ದಾರಿ ಸಿನಿಮಾಗೆ ಅಪ್ಪು ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಂಆ ತೆರೆ ಮೇಲೆ ಬಂದ ಮೇಲೆ ಯಾವ ರೀತಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp