‘ಮೈ ನೇಮ್ ಇಸ್ ಆಂಜಿ’…ಶಿವಣ್ಣ ಹೀಗೆ ಹೇಳ್ತಿರೊದ್ಯಾಕೆ…?

05-Mar-2019

ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾ ಅಂದರೆ ಪಕ್ಕಾ ಫ್ಯಾಮಿಲಿ ಕೂತು ನೋಡುವಂತ ಸಿನಿಮಾ ಅಂತಾರೆ ಶಿವಣ್ಣನ ಅಭಿಮಾನಿಗಳು… ಶಿವಣ್ಣ ಸಿನಿಮಾಗಳು ಕೊಟ್ಟ ದುಡ್ಡಿಗೆ ಮೋಸವಾಗದಂತೆ ಇರುತ್ತವೆ.. ಟಗರು ಸಿನಿಮಾ ಹಿಟ್ ಆದ ಮೇಲೆ ಶಿವಣ್ಣನ ಇಮೇಜ್ ಒಂದು ರೀತಿ ಚೇಂಜ್ ಆಗೋಯ್ತು…. ದಿ ವಿಲನ್ ಸಿನಿಮಾ ಅಭಿಮಾನಿಗಳಿಗೆ ಅದ್ಯಾಕೋ ಇಷ್ಟವಾಗಲಿಲ್ಲ…. ಇದೀಗ ಶಿವಣ್ಣ ಮತ್ತೊಂದು ಹೊಸ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ… ಅದೇ ‘ಮೈ ನೇಮ್ ಇಸ್ ಆಂಜಿ’ ಸಿನಿಮಾ .. ಈ ಚಿತ್ರಕ್ಕೆ ಜೂನ್‌ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.

 

ಜಯಣ್ಣ ಕಂಬೈನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದೆ. ಶಿವಣ್ಣ  ಚಿತ್ರದ ಕತೆ ಕೇಳಿ, ಚಿತ್ರೀಕರಣಕ್ಕೆ ಡೇಟ್‌ ಕೊಟ್ಟನಂತರವೇ ನಿರ್ದೇಶಕ ಹರ್ಷ, ತಮ್ಮಿಬ್ಬರ ಕಾಂಬಿನೇಷನಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿರುವ ಕುರಿತು ಅಧಿಕೃತ ಮಾಹಿತಿ ತಿಳಿಸಿದ್ದಾರೆ...

'ಶಿವಣ್ಣ ಜತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ ಅಂತ ತುಂಬಾ ಹಿಂದೆಯೇ ಹೇಳಿದ್ದೆ. ಅದು ಮೈ ನೇಮ್‌ ಈಸ್‌ ಆಂಜಿ ಹೆಸರಲ್ಲೇ ಶುರುವಾಗುತ್ತೆ ಅಂತಲೂ ಶಿವಣ್ಣ ಪ್ರಕಟಿಸಿದ್ದರು. ಬೇರೆ ಸಿನಿಮಾಗಳ ಕಾರಣಕ್ಕೆ ಇಲ್ಲಿ ತನಕ ಅದು ತಡವಾಯಿತು. ಈಗ ಅದಕ್ಕೆ ಸಂದರ್ಭ ಬಂದಿದೆ. ಈಗಾಗಲೇ ಮಾತುಕತೆ ಫೈನಲ್‌ ಹಂತಕ್ಕೆ ಬಂದಿವೆ. ನಮ್ಮಿಬ್ಬರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದೊಂದು ಡಿಫರೆಂಟ್‌ ಸಿನಿಮಾ ಆಗಲಿದೆ' ಎನ್ನುತ್ತಾರೆ ಯಂಗ್ ಡೈರೆಕ್ಟರ್ ಹರ್ಷ.

ಕನ್ನಡದ ಬಹುಬೇಡಿಕೆಯ ನಟಿಯರಲ್ಲೇ ಒಬ್ಬರು ನಾಯಕಿ ಆಗಿ ಆಯ್ಕೆ ಆಗುವ ಸಾಧ್ಯತೆಗಳಿವೆ ಎಂದಿದ್ದಾರೆ ಆದರೆ ನಟಿ ಯಾರು ಎಂಬುದನ್ನು ತಿಳಿಸಿಲ್ಲ.... ಹಾಗೆಯೇ ಯಶ್‌ ಜತೆಗೆ ಫಿಕ್ಸ್‌ ಆಗಿದ್ದ 'ರಾಣಾ' ಚಿತ್ರವನ್ನೇ ಶಿವರಾಜ್‌ಕುಮಾರ್‌ ಅವರಿಗೆ ಮಾಡುತ್ತಿದ್ದಾರೆನ್ನುವ ಮಾತುಗಳನ್ನು ಹರ್ಷ ಅಲ್ಲಗಳೆದಿದ್ದಾರೆ. ಅದೇ ಬೇರೆ ಸಿನಿಮಾ ಇದೇ ಬೇರೆ ಸಿನಿಮಾ ಎಂದು ಯಂಗ್ ಡೈರೆಕ್ಟರ್ ಸ್ಪಷ್ಟಪಡಿಸಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp