ಕ್ರೇಜಿ ಕ್ವೀನ್ ತಮ್ಮ ಅಭಿಷೇಕ್’ಗೆ ಈ ಸ್ಟಾರ್ ನಟಿಯ ಮಗಳು ಜತೆಯಾಗ್ತಾರಾ..?!

05-Mar-2019

ಸ್ಟಾರ್ ನಟ ನಟಿಯರ ಮಕ್ಕಳು ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋದು ಕಾಮನ್ ಆಗಿಬಿಟ್ಟಿದೆ… ಆದರೆ ಕೊಟ್ಟವರೆಲ್ಲ ಸಕ್ಸಸ್ ಆಗೋದು ತೀರಾ ಕಡಿಮೆ… ಸ್ಟಾರ್ ನಟ ನಟಿಯರ ಮಕ್ಕಳು ಈಗಾಗಲೇ ತುಂಬಾ ಜನ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಕೆಲವರು ಸಕ್ಸಸ್ ಕಂಡರೆ ಇನ್ನೂ ಕೆಲವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ… ಸ್ಯಾಂಡಲ್’ವುಡ್ಗೆ ಅತೀ ಚಿಕ್ಕ ವಯಸ್ಸಿಗೆ ಹಿರೋಹಿನ್ ಆಗಿ ಎಂಟ್ರಿ ಕೊಟ್ಟು ಸಕ್ಸಸ್ ಕಂಡ ನಟಿ ಎಂದರೆ ಅದು ಸುಧಾರಾಣಿ… ಆನಂದ್ ಫಿಲ್ಮ್ ಮೂಲಕ ಬಣ್ಣ ಹಚ್ಚಿದ ಈಕೆಗೆ ಅದೃಷ್ಟ ಕೈ ಹಿಡಿದ್ದಿದ್ದಂತೂ ಸುಳ್ಳಲ್ಲ… ಇದೀಗ ಸುಧಾರಾಣಿಯ ಮಗಳು ನಿಧಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ..

ದಿ ವಿಲನ್ ಸಿನಿಮದ ಬಳಿಕ ಡೈರೆಕ್ಟರ್ ಪ್ರೇಮ್ ರಕ್ಷಿತಾ ಸಹೋದರ ಅಭಿಷೇಕ್ ರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಭಿಷೇಕ್ ಗಾಗಿ ಪ್ರೇಮ್ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬುದು ಹಳೆಯ ವಿಚಾರವಾಗಿತ್ತು.. ಗಾಂಧೀನಗರದಲ್ಲಿ ಈ ಬಗ್ಗೆ ಹೆಚ್ಚು ಮಾತುಕತೆ ನಡೆಯುತ್ತಿತ್ತು… . ಮಾರ್ಚ್ 31 ರಂದು ರಕ್ಷಿತಾ ಹುಟ್ಟುಹಬ್ಬದ ದಿನವೇ ಅಭಿಷೇಕ್ ಹೊಸ ಸಿನಿಮಾ ಟೈಟಲ್, ಫಸ್ಟ್ ಲುಕ್ ರಿಲೀಸ್ ಮಾಡಲು ಪ್ರೇಮ್ ನಿರ್ಧಾರ ಮಾಡಿದ್ದಾರಂತೆ...

ಆದರೆ ಅಭಿಷೇಕ್ ಗೆ ನಾಯಕಿಯಾಗಲಿರುವುದು ಸುಧಾರಾಣಿ ಮಗಳಾ ಎಂಬ ಮಾತು ಹರಿದಾಡುತ್ತಿತ್ತು…  ಸುಧಾರಾಣಿ ಪುತ್ರಿ ನಿಧಿ ಅಭಿಷೇಕ್ ಗೆ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಾರೆ ಎಂಬ ಮಾತು ಕೇಳಿಬಂದಿದ್ದರೂ, ಈ ಬಗ್ಗೆ ಪ್ರೇಮ್ ಅವರನ್ನು ಕೇಳಿದಾಗ 'ನಾನಿನ್ನೂ ನಾಯಕಿಯ ಆಯ್ಕೆ ಮಾಡಿಲ್ಲ. ಆದರೆ ಈ ಬಾರಿ ಪಕ್ಕಾ ಕನ್ನಡದ ಹೊಸ ಮುಖಕ್ಕೆ ಅವಕಾಶ ನೀಡುತ್ತೇನೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ. ಹಾಗಾದರೆ ಸುಧಾರಾಣಿ ಪುತ್ರಿಯೇ ಆ ಹೊಸ ಮುಖವಾ ಎಂದು ತಿಳಿಯಲು ಎಲ್ಲವೂ ಸ್ವಲ್ಪ ದಿನ ಕಾಯಲೇಬೇಕು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp