ಅಭಿನಯ ಚಕ್ರವರ್ತಿ ಮೆಚ್ಚಿನ ಅರ್ಜುನ್ ಜನ್ಯಾ ಸೆಂಚುರಿ ಸಾಂಗ್..

06-Mar-2019

ಬಣ್ಣದ ಲೋಕದಲ್ಲಿ ಕೆಲವೊಮ್ಮೆ ಯಾರು ಯಾವಾಗ ಯಶಸ್ಸನ್ನು ಕಾಣುತ್ತಾರೆ ಎಂಬುದೆ ತಿಳಿಯುವುದಿಲ್ಲ… ಒಮ್ಮೆ ಬಣ್ಣದ ಜಗತ್ತು ಕೈ ಹಿಡಿದರೆ ಸಾಕು ಅದೃಷ್ಟ ಖುಲಾಯಿಸಿತು ಅಂತಾನೇ ಅರ್ಧ… ಅದೇ ಸಾಲಿಗೆ ಸೇರುವವರು ಎಜೆ ಮೀನ್ಸ್ ಅರ್ಜುನ್ ಜನ್ಯಾ.. ಈಗಾಗಲೇ ಅರ್ಜುನ್ ಜನ್ಯಾ ಕೊಟ್ಟಿರುವ ಸಾಂಗ್ ಗಳೆಲ್ಲವೂ ಕೂಡ ಬರ್ಜರಿ ಹಿಟ್ ಆಗಿವೆ… ಒಂದರ ಹಿಂದೆ ಒಂದು ಹಿಟ್ ಸಾಂಗ್ ಗಳನ್ನೆ ಕೊಡುತ್ತಿದ್ದಾರೆ.. ಜನ್ಯಾ ಸಾಂಗ್ ಎಂದರೆ ಕೂತಿರುವವರು ಕೂಡ ಎದ್ದು ಕುಣಿಯುವಂತೆ ಮಾಡುತ್ತದೆ.. ರೊಮ್ಯಾಂಟಿಕ್ ಸಾಂಗ್ ಮಾಡೋದ್ರಲ್ಲೂ ಕೂಡ ಅರ್ಜುನ್ ಜನ್ಯಾ ಎತ್ತಿದ ಕೈ…ಇದೀಗ ಅವರು 100 ನೇ ಮಾಡುತ್ತಿರುವ ಸಂಭ್ರಮದಲ್ಲಿ ಇದ್ದಾರೆ.

ಚಂದನದವನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ  99 ಸಿನಿಮಾ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಪಾಲಿಗೆ ನೂರನೇ ಸಿನಿಮಾವಾಗಿದೆ.. ಈ ಚಿತ್ರದ ಹಾಡೊಂದು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಹಾಡಿನ ಮೆಲೊಡಿಗೆ ಕೇಳುಗರು ಫಿದಾ ಆಗಿದ್ದಾರೆ.. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿರುವ 'ಹೀಗೇ ದೂರ' ಎನ್ನುವ ಸೆಂಟಿಮೆಂಟಲ್ ಮೆಲೊಡಿ ಹಾಡೊಂದು ಯೂ ಟ್ಯೂಬ್ ನಲ್ಲಿ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿ ಹಿಟ್ ಆಗಿದೆ.. ಇದನ್ನು ಸ್ವತಃ ಅಭಿನಯ ಚಕ್ರವರ್ತಿ ಮೆಚ್ಚಿಕೊಂಡು, ಗಣೇಶ್ ಮತ್ತು ಅರ್ಜುನ್ ಜನ್ಯಾಗೆ ಅಭಿನಂದಿಸಿದ್ದಾರೆ. ನಿಜವಾಗಿಯೂ ಅದ್ಭುತ ಹಾಡು. ಅರ್ಜುನ್ ಜನ್ಯಾ ಅದ್ಭುತ ಕಂಪೋಸಿಂಗ್. ನನಗೆ ಗೊತ್ತು, ಗಣೇಶ್ ಆನ್ ಸ್ಕ್ರೀನ್ ನಲ್ಲಿ ಈ ಹಾಡಿಗೆ ಅದ್ಭುತವಾಗಿ ಅಭಿನಯಿಸಿರ್ತಾರೆ' ಎಂದು ಕಿಚ್ಚ ಅರ್ಜುನ್ ಜನ್ಯಾ ಅವರನ್ನು ಹಾಡಿ ಹೊಗಳಿದ್ದಾರೆ. ಸಿನಿಮಾ ಬಜಾರ್ ರೇಸ್ ಕುದುರೆಯಂತೆ ಓಡುತ್ತಿರುವ ಸಂಗೀತ ನಿರ್ದೇಶಕ ಎಜೆ ಅವರಿಗೆ ಎಲ್ಲರೂ ಅಭಿನಂದನೆಯನ್ನು ಸಲ್ಲಿಸಿದ್ದಾರೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp