‘ದಿ ವಿಲನ್’ ಹಿಟ್ ಅಲ್ಲ ಫ್ಲಾಪ್ ಚಿತ್ರ ಎಂದ ಕಿಚ್ಚ ಸುದೀಪ್..!?

06-Mar-2019

ಸ್ಯಾಂಡಲ್ ವುಡ್’ನಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾ ದಿ ವಿಲನ್… ಈ ಸಿನಿಮಾದ ಮೇಲೆ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡಿದ್ದರು ಅಭಿಮಾನಿಗಳು..ಮಲ್ಟಿ ಸ್ಟಾರ್ ಸಿನಿಮಾ ಅಂದ್ರೆ ಕೇಳಬೇಕಾ… ಅಭಿಮಾನಿಗಳ ನಿರೀಕ್ಷೆಯೇ ಬೇರೆಯಾಗಿರುತ್ತದೆ… ಆದರೆ ಸಿನಿಮಾ ಯಾಕೋ ಅಭಿಮಾನಿಗಳ ನಿರೀಕ್ಷೆಯನ್ನು ಮೀರಿಸಲು ಸಾಧ್ಯವಾಗಲೇ ಇಲ್ಲ…ಅಂದುಕೊಂಡಂತೆ ಸಿನಿಮಾ ಯಶಸ್ಸನ್ನು ಕಾಣಲಿಲ್ಲ… ಕಳೆದ ವರ್ಷ ಕನ್ನಡದ ಬಹು ನಿರೀಕ್ಷೆಯ ಸಿನಿಮಾವಾದ ದಿ ವಿಲನ್ ಅಭಿಮಾನಿಗಳನ್ನು ರಂಜಿಸೋದಕ್ಕಿಂತ ಹೆಚ್ಚಾಗಿ ಬೇಸರಿಸಿದ್ದೆ ಹೆಚ್ಚು… ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಈ ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದರು… ಅಂದುಕೊಂಡಂಗೆ ಸಿನಿಮಾ ಓಡಲಿಲ್ಲ ಆದರೆ ಗಳಿಕೆಯಲ್ಲಿ ಮಾತ್ರ ಅದ್ಭುತವಾಗಿತ್ತು ಎಂದು ಸ್ವತಃ ನಿರ್ಮಾಪಕರೆ ತಿಳಿಸಿದ್ದರು…

ಮೊನ್ನೆ ಮೊನ್ನೆಯಷ್ಟೆ ಕಿಚ್ಚ ಸುದೀಪ್ ಅವರನ್ನು ಖಾಸಗಿ ಚಾನಲ್ ವೊಂದರಲ್ಲಿ  ಸಂದರ್ಶನ ಮಾಡಲಾಗುತ್ತಿತ್ತು..  ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರನ್ನು ಪೈಲ್ವಾನ್ ಚಿತ್ರದ ಬಗ್ಗೆ, ವಿಲ್ಲನ್ ಚಿತ್ರದ ಬಗ್ಗೆ, ಸಲ್ಮಾನ್ ಖಾನ್ ಜೊತೆ ದಬಾಂಗ್ ಚಿತ್ರದ ಬಗ್ಗೆ, ದರ್ಶನ್ ಅವರ ಬಗ್ಗೆ, ಹಾಗು IT ರೇಡ್ ಬಗ್ಗೆ ಕೂಡ ಕೇಳಲಾಗಿತ್ತು.ಈ ಸಮಯದಲ್ಲಿ ದಿ ವಿಲನ್ ಚಿತ್ರದ ಬಗ್ಗೆ ಕೇಳಿದಾಗ , ಕಿಚ್ಚ ಸುದೀಪ್ ಅವರು ಹೌದು ದಿ ವಿಲನ್ ಬಿಡುಗಡೆ ಆಗಿ ಒಂದೇ ಒಂದು ವಾರಕ್ಕೆ ಥಿಯೇಟರ್ ಖಾಲಿ ಖಾಲಿ, ಯಾರು ಜನನೇ ಬಂದಿಲ್ಲ, ಸಿನಿಮಾ ಓಡಿಲ್ಲ ಎಂದು ಓಪನ್ ಆಗಿ ಹೇಳಿದ್ದಾರೆ..

ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಪೈಲ್ವಾನ್ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಪೈಲ್ವಾನ್ ಚಿತ್ರ ಇನ್ನೇನು ಕೆಲವು ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ದಿ ವಿಲನ್ ಸಿನಿಮಾ ಬಿಡುಗಡೆಗೂ ಮೊದಲು ಕೊಟ್ಟ ಬಿಲ್ಡಪ್ ಗೂ ಸಿನಿಮಾ ಬಿಡುಗಡೆಯಾದ ಬಳಿಕ ಅಭಿಮಾನಿಗಳ ರೆಸ್ಪಾನ್ಸ್ ಗೂ ಒಂದಕ್ಕೊಂದು ಸಂಬಂಧವೆ ಇರಲಿಲ್ಲ ಎನ್ನುವ ರೀತಿ ಇತ್ತು.. ಒಟ್ಟಿನಲ್ಲಿ ಶಿವಣ್ಣನ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳು ಈ ರೀತಿಯ ಸಿನಿಮಾವನ್ನು ಮಾಡಬೇಡಿ ಎಂದು ಅವರಿಬ್ಬರಿಗೂ ಹೇಳಿದ್ದಾರೆ..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp