ಕಿಚ್ಚನ ಧ್ವನಿಯಲ್ಲಿ ಬಿಡುಗಡೆಯಾಯ್ತು ಉದ್ಘರ್ಷ ಸಿನಿಮಾ ಟ್ರೈಲರ್..!!

07-Mar-2019

ಮಾಸ್ಟರ್ ಮೈಂಡ್ ಅಂತಾನೇ ಫೇಮಸ್ ಆಗಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಫೇಮಸ್…ಇದೀಗ ಅವರ ನಿರ್ದೇಶನದ ಉದ್ಘರ್ಷ ಸಿನಿಮಾ ಟ್ರೈಲರ್ ಲಾಂಚ್ ಆಗಿದೆ..ಸ್ಯಾಂಡಲ್ ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘರ್ಷ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದರು… ಈ ಸಿನಿಮಾದ ಮೂಲಕ ಮಾಸ್ಟರ್ ಮೈಂಡ್ ಡೈರೆಕ್ಟರ್ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮರ್ಡರ್ ಮಿಸ್ಟರಿಯನ್ನು ಹೊಂದಿರುವ ಕಥೆ ಇದಾಗಿದೆ… ಅದರ ಸುತ್ತಾ ಒಂದರ ಹಿಂದೆ ಒಂದು ಸಾಗೋ ದೃಶ್ಯಾವಳಿ ಹೊಂದಿರೋ ಈ ಟ್ರೈಲರ್ ಚೆನ್ನಾಗಿ ಮೂಡಿಬಂದಿದೆ.. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚು ಮಾಡಿದೆ.

ಈಗಾಗಲೇ ಯಜಮಾನ ಸಿನಿಮಾದಲ್ಲಿ ದೇವಿಶೆಟ್ಟಿ ಪಾತ್ರದಲ್ಲಿ ಗುರುತಿಸಿಕೊಂಡು ಜನ ಮನ ಗೆದ್ದಿರುವ ಈತ ಈ ಸಿನಿಮಾದಲ್ಲಿಯೂ ಕೂಡ ಖಳನಟನಾಗಿ ಗುರುತಿಸಿಕೊಂಡಿದ್ದಾರೆ.. ಅನೂಪ್ ಠಾಕೂರ್ ಸಿಂಗ್ ಎಂಬ ಅಜಾನುಬಾಹು ನಾಯಕನಿಗೆ ಸೆಡ್ಡು ಹೊಡೆಯುವಂಥಾ ಖಳನಟರ ಪಡೆಯೂ ಮಾಸ್ ಪ್ರೇಕ್ಷಕರನ್ನೂ ಉದ್ಘರ್ಷ ಸಿನಿಮಾದಂತ ವಾಲುವಂತೆ ಆಕರ್ಷಣೆ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಿರುವ ಈ ಟ್ರೈಲರಿಗೆ ಕಿಚ್ಚ ಸುದೀಪ್ ಖಡಕ್ ವಾಯ್ಸ್ ಇದೆ. ಜೊತೆಗೆ ಈ ಚಿತ್ರದ ಮೂಲಕ ಸುನೀಲ್ ಕುಮಾರ್ ದೇಸಾಯಿ ಯುಗ ಮತ್ತೆ ಪ್ರಾರಂಭವಾಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.. ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿರೋ ಉದ್ಘರ್ಷ ಮತ್ತೊಂದು ಮಹಾ ಗೆಲುವಿನ ಸಾಕ್ಷಿಯಾಗೋ ಲಕ್ಷಣಗಳನ್ನು ಈ ಟ್ರೈಲರ್ ಹೊಂದಿದೆ. ಒಟ್ಟಾರೆ ಸುನೀಲ್ ಕುಮಾರ್ ದೇಸಾಯಿ  ಸ್ಯಾಂಡಲ್ನಲ್ಲಿ ಮತ್ತೆ ಅಬ್ಬರಿಸುತ್ತಾರೆ ಎಂಬುದು ಗಾಂಧಿನಗರದ ಮಾತಾಗಿದೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp