‘ದಶರಥ’ ಸಿನಿಮಾಗೆ ಎದುರಾಯ್ತು ಮತ್ತೊಂದು ಸಂಕಷ್ಟ..!!

07-Mar-2019

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದಶರಥ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ… ಬಿಡುಗಡೆ ಸಜ್ಜಾಗಿರುವ ಈ ಸಿನಿಮಾಗೆ ಒಂದರ ಮೇಲೊಂದು ಸಂಕಷ್ಟ ಎದುರಾಗಿದೆ…ಮೊನ್ನೆ ಮೊನ್ನೆಯಷ್ಟೆ ದಶರಥ ಸಿನಿಮಾದ ಶಾಂತಾ ಸಾಂಗ್ ವಿವಾದಕ್ಕೆ ಗುರಿಯಾಗಿತ್ತು.. ಇದೀಗ ಅದೇ ಸಿನಿಮಾದ ಎರಡನೇ ಸಾಂಗ್ ಬಿಡುಗಡೆಯಾಗಿದೆ.. ಈ ಸಾಂಗ್ ಕೂಡ ಕಾಂಟ್ರವರ್ಸಿ ಸೃಷ್ಟಿಸಿದ್ದು ಸದ್ಯ ಚಿತ್ರತಂಡಕ್ಕೆ ನ್ಯಾಯಾಲಯ ನೋಟೀಸ್ ನೀಡಿದೆ..

ಕ್ರೇಜಿ ಸ್ಟಾರ್​ ರವಿಚಂದ್ರನ್​​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ದಶರಥ ಸಿನಿಮಾದಲ್ಲಿ 'ಕರಿ ಕೋಟು ಹಾಕೋರೆಲ್ಲ ಗೆಲ್ಲೋದಿಲ್ಲ' ಎನ್ನುವ ಹಾಡು  ಫೆ. 27 ರಂದು ಬಿಡುಗಡೆಯಾಗಿತ್ತು... ವಿ.ಮನೋಹರ ಸಾಹಿತ್ಯದ ಈ ಗೀತೆಗೆ ಗುರುಕಿರಣ್ ಸಂಗೀತ ನೀಡುವುದರ ಜತೆಗೆ ಪಿಚಲ್ಲಿ ಶ್ರೀನಿವಾಸ್​ ಹಾಗೂ ದೊಡ್ಡಪ್ಪ ಎಂಬುವವರು ಈ ಹಾಡಿಗೆ ಧನಿಗೂಡಿಸಿದ್ದರು… ಈ ಹಾಡಿನ ಸಾಹಿತ್ಯವೀಗ ವಿವಾದದ ಕಾರಣವಾಗಿದೆ..  ಇದರಲ್ಲಿ ಬಳಕೆ ಮಾಡಿರುವ ಪದಗಳು ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡುವಂತಿವೆ ಎಂದು ಬೆಂಗಳೂರಿನ ವಕೀಲ ಗಡಿಲಿಂಗಪ್ಪ ಕೋರ್ಟ್​ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ 9ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಗೀತ ರಚನಕಾರ,ಗಾಯಕ, ಸಂಗೀತ ನಿರ್ದೇಶಕ,ಚಿತ್ರ ನಿರ್ಮಾಪಕ ಹಾಗೂ ಲಹರಿ ಸಂಸ್ಥೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ..ಇನ್ನು ರವಿಚಂದ್ರನ್ ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.. ಎಮ್​.ಎಸ್.ರಮೇಶ್​ ಎಂಬುವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅಕ್ಷಯ್​ ಮಹೇಶ್​.ಕೆ ಎಂಬುವರು ಬಂಡವಾಳ ಹೂಡಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp