ಮಹಿಳಾ ದಿನಾಚರಣೆಯಂದೇ ನಟಿ ಹರಿಪ್ರಿಯಾ ಬಾಯಲ್ಲಿ #MeToo…!!!

08-Mar-2019

ಒಂದಷ್ಟು ದಿನ ಮೀಟೂ ಶಬ್ಧ ಇಡೀ ಚಿತ್ರೋದ್ಯಮವನ್ನೇ ತಲ್ಲಣಗೊಳಿಸಿತ್ತು. ಸ್ಟಾರ್ ನಟರು ಮೀಟೂ ಶಬ್ಧ ಕೇಳಿ ಬೆಚ್ಚಿ ಬಿದ್ದಿದ್ದರು. ಸ್ಯಾಂಡಲ್ವುಡ್’ನಲ್ಲಿ ಖ್ಯಾತ ನಟನ ಮೇಲೆ ನಟಿಯೊಬ್ಬರು ಆರೋಪ ಮಾಡಿದ್ರು. ಒಟ್ಟಾರೆ ಮೀಟೂ ಪರ-ವಿರೋಧ ಚರ್ಚೆಗಳು ಇವತ್ತಿಗೂ ಇವೆ. ಆದರೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಇಂದು ಸ್ಯಾಂಡಲ್’ವುಡ್ನ ಸ್ಟಾರ್ ನಟಿಯೊಬ್ಬರು ಮೀಟೂ ಬಗ್ಗೆ ಮಾತನಾಡಿದ್ದಾರೆ. ಚಿತ್ರೋದ್ಯಮ ಯಾವತ್ತಿಗೂ ನನ್ನ ದೃಷ್ಟಿಯಲ್ಲಿ ಪ್ರೊಟೆಕ್ಟಿವ್ ಆಗಿಯೇ ಇದೆ ಎಂದಿದ್ದಾರೆ..

ಯಾವುದೇ ಕ್ಷಣ ಕೂಡ ನನಗೆ ಈ ಕ್ಷೇತ್ರ ಸುರಕ್ಷಿತವಲ್ಲ ಅಂತ ಅನಿಸಿದ್ದೇ ಇಲ್ಲ. ನಾನು ಹದಿನಾರು ವರ್ಷಕ್ಕೇ ನಟಿಯಾಗಿ ಚಿತ್ರೋದ್ಯಮಕ್ಕೆ ಬಂದವಳು. ಅಂದಿನಿಂದ ಇವತ್ತಿನ ತನಕ ಚಿತ್ರೋದ್ಯಮ ನನ್ನನ್ನು ಚಿಕ್ಕವಳ ಹಾಗೆಯೇ ನೋಡುತ್ತಾ ಬಂದಿದೆ. ನಾನು ನನ್ನಮ್ಮ ಎಲ್ಲಿಗೆ ಹೋದರು ಜೊತೆಯಾಗಿಯೇ ಹೋಗುತ್ತೇವೆ. ಇಂಡಸ್ಟ್ರಿ ನಮ್ಮನ್ನು ತುಂಬಾ ಗೌರವದಿಂದ ಕಾಣುತ್ತದೆ. ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮೀಟೂ ಎನ್ನುವುದನ್ನು ನಾನು ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಇದೆಲ್ಲಾ ಕಾಮನ್. ನಾವು ಹೇಗೆ ನೊಡುತ್ತೇವೆ, ಹೇಗೆ ಸ್ವೀಕರಿಸುತ್ತೇವೆ, ಅವರನ್ನು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ. ಹಾಗಂತ ಪುರುಷರೆಲ್ಲರೂ ಕೆಟ್ಟವರು, ಹುಡುಗಿಯರೆಲ್ಲ ಒಳ್ಳೆಯವರೂ ಅಂತಲ್ಲ. ನನಗೂ ಅನೇಕ ಜನ ಹುಡುಗರು ಫ್ರೆಂಡ್ಸ್ ಇದ್ದಾರೆ. ಅವರೆಲ್ಲ ಕಾಲೇಜು ಸ್ನೇಹಿತರು. ನನ್ನ ಚಿತ್ರರಂಗದ ಪುರುಷ ಸ್ನೇಹಿತರು ಇದ್ದಾರೆ. 12 ವರ್ಷದಿಂದ ಇದ್ದೇನೆ, ನನಗೆ ಯಾವತ್ತೂ ಆ ಥರದ್ದ ಅನುಭವ ಆಗಿಲ್ಲ. ಬೇರೆ ಸಿನಿಮಾ ಇಂಡಸ್ಟ್ರಿ ನೋಡಿದ್ದೀನಿ, ಕನ್ನಡದಷ್ಟು ಸೇಫ್ ಚಿತ್ರರಂಗ ಬೇರೊಂದಿಲ್ಲ ಎನ್ನುತ್ತಾರೆ ಈ ಉಗ್ರಂ ನಾಯಕಿ. 

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp