ಅಂದು ‘ಅವರು’ ಇಲ್ಲದೇ ಇದ್ದಿದ್ದರೇ ನನ್ನ ಸಿನಿಮಾ ನಿರೀಕ್ಷಿಸಿದಷ್ಟು ರೀಚ್ ಆಗ್ತಾ ಇರಲಿಲ್ಲ ಎಂದ ಸುದೀಪ್..!!

11-Mar-2019

ಅಭಿನಯ ಚಕ್ರವರ್ತಿ ಸುದೀಪ್ ಬಹು ನಿರೀಕ್ಷಿತ ಸಿನಿಮಾಗಳ ಭರ್ಜರಿ ಶೂಟಿಂಗ್’ನಲ್ಲಿದ್ದಾರೆ.  ಪೈಲ್ವಾನ್, ಕೋಟಿಗೊಬ್ಬ-3, ಸೈರಾ ನರಸಿಂಹರೆಡ್ಡಿ  ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಕಿಚ್ಚ ಸುದೀಪ್ ಹೆಸರು ಬಾರಿ ರಾಜಕೀಯ ವಲಯದಲ್ಲಿ ಅಷ್ಟಾಗಿ ಕೇಳಿ ಬಂದಿಲ್ಲ.ಇದಕ್ಕೆ ನೂರೆಂಟು ಕಾರಣಗಳಿದ್ದರೂ, ಸುದೀಪ್ ಮಾತ್ರ ಬಿಗ್ ಬಜೆಟ್ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಕೊಂಡಿದ್ದಾರೆ. ಅದೇನೇ ಇರಲಿ, ಇತ್ತೀಚೆಗೆ ಸಿನಿಮಾವೊಂದರ ಟ್ರೈಲರ್ ಲಾಂಚ್ ಸಮಯದಲ್ಲಿ ಕಿಚ್ಚ ಓಪನ್ ಆಗಿ ಮಾತನಾಡಿದ್ದಾರೆ. ‘ಮಿಸ್ಸಿಂಗ್ ಬಾಯ್’ ಸಿನಿಮಾ ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ಕಿಚ್ಚ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

 

ಎಸ್.. 2006ರಲ್ಲಿ ತೆರೆಕಂಡ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಸಿನಿಮಾ ಹಿಟ್ ಲಿಸ್ಟ್ ಸೇರಿತು. ತಾವೇ ನಿರ್ದೇಶಿಸಿ, ನಿರ್ಮಿಸಿದ್ದ ಆ ಸಿನಿಮಾ ಸುದೀಪ್​ರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಕೂಡ ಇತ್ತು. ಆದರೆ ಸ್ಯಾಟಲೈಟ್ ರೈಟ್ಸ್ ವಿಚಾರದಲ್ಲಿ 20ರಿಂದ 25ಲಕ್ಷಕ್ಕೆ ಏರೋದು ಕಷ್ಟಸಾಧ್ಯವಾಗಿತ್ತಂತೆ. ಅಂದಹಾಗೇ ಅವರ ಕನಸಿನ ಸಿನಿಮಾ ಮೈ ಆಟೋಗ್ರಾಫ್ . ನಿರೀಕ್ಷಿಸಿದ್ದಷ್ಟೂ ರೀಚ್ ಆಗಿರಲಿಲ್ಲ.50 ರಿಂದ 60 ಲಕ್ಷ ಬೆಲೆಗೆ ಮಾರಾಟವಾಗಬೇಕಿದ್ದ ಕಿಚ್ಚನ ಆಟೋಗ್ರಾಫ್, 25ಲಕ್ಷ ಮೀರೋದು ಕಷ್ಟವಾಗಿತ್ತು. ಅದರ ಹಿಂದಿನ ಶ್ರಮ ಗುರ್ತಿಸಿ, ಕೋಟಿ ರೂಪಾಯಿಗೆ ಸಿನಿಮಾನ ಕೊಂಡುಕೊಳ್ಳುವಂತೆ ಮಾಡಿದ್ದು ಇದೇ ಮಿಸ್ಸಿಂಗ್ ಬಾಯ್ ನಿರ್ದೇಶಕ ರಘುರಾಮ್.

ಇದನ್ನ ಖುದ್ದು ಸುದೀಪ್ ಅವರೇ ವೇದಿಕೆ ಮೇಲೆ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದ್ದು ಕಿಚ್ಚನ ದೊಡ್ಡಗುಣ. ಅಂದು ಅವರು ಇಲ್ಲದೇ ಇದ್ದಿದ್ದರೇ ನನ್ನ ಸಿನಿಮಾ ನಿರೀಕ್ಷಿಸಿದಷ್ಟು ರೀಚ್ ಆಗ್ತಾ ಇರಲಿಲ್ಲ ಎಂದು ಅವರಿಗೆ ಮತ್ತೊಮ್ಮೆ ವೇದಿಕೆ ಮೇಲೆ ಕಿಚ್ಚ ಥ್ಯಾಂಕ್ಸ್ ಹೇಳಿದ್ರು.  ಆ ನಂತರ ಮಾತನಾಡಿದ ರಘುರಾಂ ಅವರು ಸುದೀಪ್ ನಮ್ಮನ್ನು ಸ್ಮರಿಸೋದು ಅವರ ದೊಡ್ಡಗುಣ. ಎಂದು ಅವರೊಬ್ಬ ಸ್ಯಾಂಡಲ್ವುಡ್’ನ ಹೆಮ್ಮರ. ಬೆಳೆದು ಬಂದ ದಾರಿಯನ್ನು ಮರೆಯದ ಮಾಣಿಕ್ಯಅವರು ಎಂದು ಹಾಡಿ ಹೊಗಳಿದ್ರು.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp