ಸ್ಯಾಂಡಲ್ ವುಡ್’ನಲ್ಲಿ ಹೋಪ್ ಮೂಡಿಸಿದ ತಾನ್ಯಾ ಹೋಪ್..!! ‘ಖಾಕಿ’ ಪಡೆ ಸೇರಿಕೊಂಡ ‘ಅಮರ್’ ನಾಯಕಿ..!!!

11-Mar-2019

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಕೇಳಿಬರುತ್ತಿರುವ ನಾಯಕಿ ಹೆಸರು ಅಂದರೆ ಅದು ತಾನ್ಯ ಹೋಪ್..ಇತ್ತಿಚಿಗೆ ಆಕೆ ಭರವಸೆಯ ನಾಯಕಿಯಾಗುತ್ತಿದ್ದಾರೆ..ಮಾಡೆಲಿಂಗ್ ಮುಖಾಂತರ ಬಣ್ಣದ ಜಗತ್ತಿಗೆ ಕಾಲಿಟ್ಟ ತಾನ್ಯಾ ಹೋಪ್, ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿ ಆಗುವ ಎಲ್ಲಾ ಲಕ್ಷಣಗಳು ಕೂಡ ಕಾಣಿಸುತ್ತಿವೆ… . ಅಭಿಷೇಕ್ ಅಂಬರೀಷ್ ಅಭಿನಯದ 'ಅಮರ್', ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಹಾಗೂ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುಭಾಷಾ ಚಿತ್ರ 'ಉದ್ಘರ್ಷ'ದಲ್ಲಿ ಕೂಡ ನಾಯಕಿ ಆಗಿ ಅಭಿನಯಿಸಿದ್ದು ತೆರೆಗೆ ಬರುವುದಷ್ಟೆ ಬಾಕಿ ಇದೆ…. ಈಗಾಗಲೇ ತೆರೆ ಕಂಡಿರುವ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲೂ ಅವರ ನಟನೆಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.

ಈ ಹಿನ್ನಲೆಯಲ್ಲಿಯೇ ತಾನ್ಯ ಹೋಪ್ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹೋಪ್ ಮೂಡಿಸಿದ್ದಾರೆ ಎನ್ನಲಾಗಿದೆ... ಇದೀಗ ಚಿರಂಜೀವಿ ಸರ್ಜಾ ಜೊತೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ… ಆ ಸಿನಿಮಾದ ಹೆಸರು ‘ಖಾಕಿ’..ಈ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.. ಆ ಪಾತ್ರಕ್ಕೆ ಸೂಕ್ತ ನಟಿಯನ್ನು ಹುಡುಕುತ್ತಿದ್ದಾಗ ತಾನ್ಯಾ ಹೋಪ್ ಸೂಕ್ತ ಎಂದು ಚಿತ್ರತಂಡಕ್ಕೆ ಅನಿಸಿದೆಯಂತೆ.. ಹಾಗಾಗಿ ತಾನ್ಯಾ ಹೋಪ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ.. ಕನ್ನಡದ ಜತೆಗೆ ಈ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ. ಎರಡು ಭಾಷೆಗೂ ಪೂರಕವಾಗುವಂತೆ ಚಿತ್ರತಂಡ ಕಲಾವಿದರ ಆಯ್ಕೆಗೆ ಆದ್ಯತೆ ನೀಡಿದೆ. ಬಹುಭಾಷಾ ನಟ ದೇವ್‌ಗಿಲ್ ಚಿತ್ರದ ಮತ್ತೊಂದು ಆಕರ್ಷಣೆ. ಚಿರು ಎದುರು ದೇವ್ ಗಿಲ್ ಖಳನಟರಾಗಿ ಕಾಣಿಸಿಕೊಳ್ಳಲಿದ್ದಾರೆ.. ಒಟ್ಟಿನಲ್ಲಿ ತಾನ್ಯ ಹೋಪ್ ಸ್ಯಾಂಡಲ್ ವುಡ್ ನ ಭರವಸೆಯ ನಾಯಕಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ…

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp