ರಾಕಿ ಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!! ಏನ್ ಗೊತ್ತಾ..?

13-Mar-2019

ಕಳೆದ ವರ್ಷ ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಾದ ಭರ್ಜರಿ ಸಿನಿಮಾ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ.. ಈ ಸಿನಿಮಾಗಾಗಿ ಚಿತ್ರತಂಡ ಸತತ ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟಿದೆ.. ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವ ಹಾಗೆ ಕೆಜಿಎಫ್ ಸಿನಿಮಾ ಬಹು ದೊಡ್ಡ ಯಶಸ್ಸನ್ನು ಗಳಿಸಿತ್ತು.. ಕೇವಲ ಕನ್ನಡದಲ್ಲಿ ಅಷ್ಟೆ ಅಲ್ಲದೆ ಪರಭಾಷೆಯಲ್ಲಿ ಬಿಡುಗಡೆಯಾಗಿತ್ತು.. ಯಶ್ ಅನ್ನು ಮೆಚ್ಚಿಕೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಪಟ್ಟರು.. ರಾತ್ರೋ ರಾತ್ರಿ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟರು.. ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಸಲಾಂ ರಾಕಿ ಭಾಯ್ ಎನ್ನುತ್ತಿದ್ದರು.. ಆದರೆ ಸಿನಿಮಾದ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ,

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಾಪ್ಟರ್ 1 ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಯಶಸ್ಸು ಕಂಡಿತ್ತು. ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಗಳಿಕೆಯಲ್ಲಿಯೂ ದಾಖಲೆ ಮೇಲೆ ದಾಖಲೆ ಬರೆದಿತ್ತು. ಇದಿಗ ಇದರ ಮುಂದುವರೆದ ಭಾಗ 'ಕೆಜಿಎಫ್ ಚಾಪ್ಟರ್ 2' ಪ್ರಾರಂಭವಾಗಿದೆ. ಸದ್ದಿಲ್ಲದೆ 'ಕೆಜಿಎಫ್ 2' ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಬೆಂಗಳೂರು ವಿಜಯನಗರದ ಕೋದಂಡ ರಾಮಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆಯನ್ನು ನೀಡಲಾಗಿದೆ.

ನಟ ರಾಕಿಂಗ್ ಸ್ಟಾರ್ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಚಿತ್ರ ತಂಡದವರು ಮುಹೂರ್ತದ ಸಂದರ್ಭದಲ್ಲಿ ಭಾಗವಹಿಸಿದ್ದಾರೆ. 'ಕೆಜಿಎಫ್ 2'ನಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ದೂಳ್ ಎಬ್ಬಿಸಲು ಕೆಜಿಎಫ್ ಬರುತ್ತಿದೆ.. ಅಭಿಮಾನಿಗಳಿಗೆ ಕೆಜಿಎಫ್ 2 ಹಬ್ಬದ ಊಟವೇ ಸರಿ…

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp